ಬಟರ್ ಫ್ಲೈ ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿರುವ ನಟ, ನಿರ್ದೇಶಕ ರಮೇಶ್ ಅರವಿಂದ್ ಮತ್ತೊಮ್ಮೆ ನಿರ್ಮಾಪಕರಾಗುತ್ತಿದ್ದಾರೆ. ಹಿರಿತೆರೆಯಲ್ಲಿ ಈಗಾಗಲೇ ನಿರ್ಮಾಪಕರಾಗಿ ಗೆಲುವು ಕಂಡಿರುವ ರಮೇಶ್, ಈಗ ಕಿರುತೆರೆ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿಯ ನಿರ್ಮಾಪಕರಾಗುತ್ತಿದ್ದಾರೆ ರಮೇಶ್ ಅರವಿಂದ್. ಮುಂದಿನ ಭಾಗಗಳ ನಿರ್ಮಾಣದ ಸಾರಥ್ಯವನ್ನು ರಮೇಶ್ ವಹಿಸಿಕೊಳ್ಳುತ್ತಿದ್ದಾರೆ.
ಸಿನಿಮಾ ಲೋಕವೇ ಬೇರೆ. ಟಿವಿ ಲೋಕವೇ ಬೇರೆ. ನಂದಿನಿ ಧಾರಾವಾಹಿಯ ಕಥೆ ನನ್ನನ್ನು ಸೆಳೆಯಿತು. ಅದೊಂದು ಅದ್ಭುತ ಫ್ಯಾಂಟಸಿ. ದೇವರು, ದೆವ್ವ, ನಾಗಲೋಕ, ಮಾಂತ್ರಿಕ.. ಹೀಗೆ ಎಲ್ಲವೂ ಫ್ಯಾಂಟಸಿ. ಆ ಫ್ಯಾಂಟಸಿಗಾಗಿಯೇ ನಿರ್ಮಾಣದ ಹೊಣೆ ಹೊತ್ತುಕೊಂಡೆ ಎನ್ನುವ ರಮೇಶ್ ಅವರಿಗೆ ನಿತಿನ್ ಎಂಬ ಪ್ರತಿಭೆ ನಿರ್ದೇಶಕರಾಗಿ ಸಿಕ್ಕಿದ್ದಾರೆ.