` ಬೆಲ್‍ಬಾಟಂಗೆ ಅಪ್ಪು ಬಹುಪರಾಕ್ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
puneeth applauds bellbottom
Puneeth, Bellbottom

ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡುತ್ತಿರುವ ಬೆಲ್‍ಬಾಟಂ ಸಿನಿಮಾಗೆ ಈಗ ಇನ್ನೂ ಒಂದು ಪವರ್ ಸಿಕ್ಕಿದೆ. ಅದು ಅಪ್ಪು ಪವರ್. ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ.

35 ವರ್ಷಗಳ ಹಿಂದಿನ ದೃಶ್ಯ ಸೃಷ್ಟಿಸುವುದು ಅತಿದೊಡ್ಡ ಸವಾಲು. ಸಾಮಾನ್ಯದ ಮಾತಲ್ಲ. ರಿಷಬ್, ಹರಿಪ್ರಿಯಾ ಅಭಿನಯವಂತೂ ಅದ್ಭುತ. ಪೋಷಕ ಪಾತ್ರಧಾರಿಗಳ ಸಣ್ಣ ಸಣ್ಣ ದೃಶ್ಯಗಳೂ ಕೂಡಾ ಮನಮುಟ್ಟುತ್ತವೆ ಎಂದಿದ್ದಾರೆ ಅಪ್ಪು.

ಅಷ್ಟೇ ಅಲ್ಲ, ಚಿತ್ರದಲ್ಲಿ ಡಿಟೆಕ್ಟಿವ್ ಸುಧಾಕರ ಸಿಐಡಿ 999 ಡಾ.ರಾಜ್ ಅಭಿಮಾನಿ. ಅಪ್ಪಾಜಿ ಮೇಲಿಟ್ಟಿರುವ ಪ್ರೀತಿಗೆ ನಾನು ಋಣಿ ಎಂದಿದ್ದಾರೆ ಅಪ್ಪು.

Kaalidasa Kannada Mestru Movie Gallery

Kabza Movie Launch Gallery