ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಪಡ್ಡೆಹುಲಿ, ಹಲವಾರು ವಿಶೇಷ ಕಾರಣಗಳಿಗೆ ಗಮನ ಸೆಳೆಯುತ್ತಿದೆ. ಚಿತ್ರದ ಹೆಸರೋ ಪಕ್ಕಾ ಮಾಸ್. ಈ ಚಿತ್ರದಲ್ಲಿಯೇ ಕನ್ನಡದ ಖ್ಯಾತ ಕವಿಗಳ ಭಾವಗೀತೆಗಳನ್ನು ಬಳಸಿಕೊಳ್ಳಲಾಗಿದೆ. ಇದೊಂದು ಮ್ಯೂಸಿಕಲ್ ಸಿನಿಮ ಎನ್ನುತ್ತಿದ್ದಾರೆ ಅಜನೀಶ್ ಲೋಕನಾಥ್.
ರವಿಚಂದ್ರನ್ ಎಂಟ್ರಿಯೊಂದಿಗೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ, ಈಗ ರಕ್ಷಿತ್ ಶೆಟ್ಟಿ ಆಗಮನದೊಂದಿಗೆ ನಿರೀಕ್ಷೆಯ ತುತ್ತತುದಿ ಮುಟ್ಟಿದೆ. ಹೀಗೆ ಭಾವಗೀತೆ, ರೊಮ್ಯಾನ್ಸ್ ಇರುವ ಚಿತ್ರದಲ್ಲಿ ನಮ್ಮ ದೇಸೀ ಆಟ ಕಬಡ್ಡಿ ಇರಲಿದೆಯಂತೆ.
ನಾಯಕನ ಇಂಟ್ರೊಡಕ್ಷನ್ ಸೀನ್ ಕಬಡ್ಡಿ ಆಟದ ಮೂಲಕ ಆಗಲಿದೆಯಂತೆ. ಸೀನಿಯರ್ ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳೋದು ಕಿರಿಕ್ ಪಾರ್ಟಿ ಕರ್ಣ ಅರ್ಥಾತ್ ರಕ್ಷಿತ್ ಶೆಟ್ಟಿ. ರಕ್ಷಿತ್ ಕರ್ಣನಾಗಿಯೇ ಆಡಿದರೆ, ಶ್ರೇಯಸ್ ಪಡ್ಡೆಹುಲಿಯಾಗಿ ಆಡ್ತಾರೆ.
ಗುರು ದೇಶಪಾಂಡೆ ನಿರ್ದೇಶನದ ಚಿತ್ರದಲ್ಲಿ ನಿಶ್ವಿಕಾ ನಾಯ್ಡು ನಾಯಕಿ.