ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಇತ್ತ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣದ ಮುಂದಿನ ಹಂತಕ್ಕೆ ಪ್ಲಾನ್ ನಡೆಯುತ್ತಿದೆ. ಹೀಗಿರುವಾಗಲೇ ಆನಂದ್ ಆಡಿಯೋ ಕೋಟಿಗೊಬ್ಬ0-3 ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದೆಯಂತೆ.
ಈ ವರ್ಷ ಕನಿಷ್ಠ 1 ಕೋಟಿ ವೀಕ್ಷಕರನ್ನು ತಲುಪುವ ಗುರಿ ಹೊಂದಿರುವ ಆನಂದ್ ಆಡಿಯೋ, ಕಿಚ್ಚ ಸುದೀಪ್ ಚಿತ್ರದ ಮೂಲಕ ದೊಡ್ಡ ಮಟ್ಟದ ಸಕ್ಸಸ್ ತಲುಪುವ ಗುರಿಯನ್ನೂ ಇಟ್ಟುಕೊಂಡಿದೆ.
ಅಭಿಷೇಕ್ ಅಂಬರೀಷ್ ಅಭಿನಯದ ಅಮರ್, ಶ್ರೀಮುರಳಿ ಅಭಿನಯದ ಮದಗಜ, ಗಣೇಶ್ ಅಭಿನಯದ 99 ಚಿತ್ರದ ಆಡಿಯೋ ರೈಟ್ಸ್ನ್ನೂ ಆನಂದ್ ಆಡಿಯೋ ಖರೀದಿಸಿದೆಯಂತೆ.