ಸಿನಿಮಾ ರಿಲೀಸ್‍ಗೂ ಮೊದಲೆ ಚಿತ್ರದಲ್ಲಿ ಮನರಂಜನೆ ಜೊತೆಗೆ ಸಂದೇಶವೂ ಇದೆ ಎಂದಿದ್ದರು ದರ್ಶನ್. ಅಷ್ಟೇ ಅಲ್ಲ, ಚಿತ್ರದ ಕಥೆ ಡಿಫರೆಂಟ್ ಎಂದಿದ್ದರು. ಹಾಗೆಯೇ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಒಂದು ಪ್ರಬಲ ಸಂದೇಶವಿದೆ. ಅದು ಮೇಕ್ ಇನ್ ಇಂಡಿಯಾ.
ಚಿತ್ರದಲ್ಲಿ ದರ್ಶನ್, ಸ್ವೀಟ್ ಬ್ರಾಂಡ್ ಕಂಪೆನಿಯ ಓನರ್. ಆ ಬ್ರಾಂಡ್ ಕಸಿದುಕೊಳ್ಳೋಕೆ ನಡೆಯುವ ಸಂಚಿನ ವಿರುದ್ಧ ಹೋರಾಡುತ್ತಾನೆ. ಅದು ಮೋದಿಯ ಮೇಕ್ ಇನ್ ಇಂಡಿಯಾ ಕಾನ್ಸೆಪ್ಟಿಗೆ ಹತ್ತಿರವಾಗಿದೆ ಅನ್ನೋದು ದರ್ಶನ್ ಮತ್ತು ಮೋದಿ.. ಇಬ್ಬರಿಗೂ ಅಭಿಮಾನಿಗಳಾಗಿರುವವರ ಮಾತು.