ಅಮ್ಮನ ಮನೆ. ರಾಘವೇಂದ್ರ ರಾಜ್‍ಕುಮಾರ್ 14 ವರ್ಷಗಳ ನಂತರ ನಟಿಸಿರುವ ಸಿನಿಮಾ. ಪಕ್ಕದ್ಮನೆ ಹುಡುಗಿ ಚಿತ್ರದ ನಂತರ ರಾಘಣ್ಣ ಅಭಿನಯದ ಮೊದಲ ಸಿನಿಮಾ ಅಮ್ಮನ ಮನೆ. ಉಳಿದವರಿಗೆ ಅದು ಸಿನಿಮಾ ಮತ್ತು ಸಿನಿಮಾ ಮಾತ್ರ. ಆದರೆ ನನಗೆ ಅದು ದೇವರ ಪ್ರಸಾದ.. ಹೀಗೆಂದು ಹೇಳಿಕೊಂಡಿರೋದು ರಾಘವೇಂದ್ರ ರಾಜ್‍ಕುಮಾರ್.
ಸ್ಟ್ರೋಕ್ ಹೊಡೆದು ಮನೆಯಲ್ಲಿದ್ದ, ಇನ್ನು ಮುಂದೆ ಬಣ್ಣ ಹಚ್ಚೋಕೆ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿದ್ದ ರಾಘವೇಂದ್ರ ರಾಜ್‍ಕುಮಾರ್‍ಗೆ ನಿಖಿಲ್ ಮಂಜು ಚಿತ್ರದ ಕಥೆ ಹೇಳಿದಾಗ ರೋಮಾಂಚನವಾಯಿತಂತೆ. ಕಾರಣ ಇಷ್ಟೆ, ತಾವು ತಮ್ಮ ತಾಯಿಗೆ ಏನೇನೆಲ್ಲ ಸೇವೆ ಮಾಡಿದ್ದರೋ, ಅದೆಲ್ಲವೂ ಚಿತ್ರದಲ್ಲಿದ್ದವು.
ಅಮ್ಮ ನನಗಾಗಿ ಏನೇನೆಲ್ಲ ಮಾಡಿದ್ದರೂ, ಅವೂ ಚಿತ್ರದಲ್ಲಿದ್ದವು. ಹೀಗೆ.. ನನಗೆ ನನ್ನ ಅಮ್ಮ ಮತ್ತೆ ಸಿಕ್ಕರು. ಹೀಗಾಗಿಯೇ ಇದು ನನಗೆ ದೇವರ ಪ್ರಸಾದ ಎಂದಿದ್ದಾರೆ ರಾಘಣ್ಣ.