ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಎಂದ ಮೇಲೆ ಅಲ್ಲಿ ಕಟೌಟುಗಳ ಹಬ್ಬವಾಗೋದು ಗ್ಯಾರಂಟಿ. ಸಿನಿಮಾ ತಂಡದ ಕಟೌಟುಗಳ ಜೊತೆ, ಅಭಿಮಾನಿಗಳೇ ಕಟೌಟ್ ಮಾಡಿಸಿ ತಂದು ನಿಲ್ಲಿಸೋದು ಇದೇ. ಈ ಬಾರಿ ಯಜಮಾನನಿಗೂ ಹಾಗೆಯೇ ಆಗಿದೆ.
ಮೆಜೆಸ್ಟಿಕ್‍ನಲ್ಲಿರೋ ನರ್ತಕಿ, ಯಜಮಾನ ಚಿತ್ರದ ಮೇನ್ ಥಿಯೇಟರ್. ಇಲ್ಲಿ ದರ್ಶನ್ ಪುತ್ರ ವಿನೀಶ್ ದರ್ಶನ್ ಕಟೌಟ್ ನಿಲ್ಲಿಸಲಾಗಿದೆ. ದರ್ಶನ್ ಎದುರು ಅವರ ಮಗನ ಕಟೌಟ್ ನಿಲ್ಲಿಸಿರೋದು ದರ್ಶನ್ ಫ್ಯಾನ್ಸ್.
ಯಜಮಾನ ಚಿತ್ರದಲ್ಲಿ ವಿನೀಶ್, ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಯಜಮಾನನ ಹಬ್ಬ ಜೋರಾಗಿದೆ.