ಯಜಮಾನ ಚಿತ್ರದಲ್ಲಿರೋದು ರೈತರ ಕಥೆನಾ..? ಅಂಥಾದ್ದೊಂದು ನಿರೀಕ್ಷೆ ಚಿತ್ರದಲ್ಲಿದೆ. ಚಿತ್ರದಲ್ಲಿ ಅಂತಹುದ್ದೇನಿದೆ ಅನ್ನೋ ಮಾತಿಗೆ ದರ್ಶನ್ ಕೊಟ್ಟಿರೋ ಉತ್ತರ ಅದು. ರೈತನೊಬ್ಬ ಕಷ್ಟಪಟ್ಟು ದುಡೀತಾನೆ. ಬೆವರು ಬಸೀತಾನೆ. ಆದರೆ, ಬೆವರನ್ನೇ ಸುರಿಸದ ಮಧ್ಯವರ್ತಿ ಅದರ ಲಾಭ ಪಡೀತಾನೆ. ಇತ್ತ, ಅದೇ ರೈತ ಬೆಂಗಳೂರಿನ ಹೋಟೆಲ್ಲು, ಮಾರ್ಕೆಟ್ಟುಗಳಲ್ಲಿ ಕೂಲಿಯಾಗ್ತಾನೆ. ರೈತನಿಗೆ ನ್ಯಾಯ ಎಲ್ಲಿ ಸಿಗುತ್ತೆ.. ಇಂಥ ಪ್ರಶ್ನೆಯನ್ನ ನಮ್ಮ ಸಿನಿಮಾ ಎತ್ತಿ ಹೇಳುತ್ತೆ ಎಂದಿದ್ದಾರೆ.
ಸ್ವಲ್ಪ ನೆನಪಿಸಿಕೊಳ್ಳಿ, ಸಾರಥಿ ಚಿತ್ರದ ರೇಷ್ಮೆ ಬೆಳೆಯುವ ರೈತ ಮತ್ತು ಪೊಲೀಸ್ ದೃಶ್ಯವನ್ನು ಕಣ್ಣ ಮುಂದೆ ತಂದುಕೊಳ್ಳಿ. ಆ ಸೀನ್ ಅದೆಷ್ಟು ವೈರಲ್ ಎಂದರೆ, ಈಗಲೂ ಆಗಾಗ್ಗೆ ವಾಟ್ಸಪ್ಪು, ಫೇಸ್‍ಬುಕ್‍ಗಳಲ್ಲಿ ಮೆರೆದಾಡುತ್ತೆ. ಹಾಗಾದರೆ, ಹರಿಕೃಷ್ಣ ಯಜಮಾನನಲ್ಲಿ ಅದೇ ಕಥೆ ಹೇಳಿದ್ದಾರಾ..?
ಇಷ್ಟೆ ದಿನ ಕಾದಿದ್ದೀವಂತೆ.. ಇನ್ನೊಂದು ದಿನ ಕಾಯೋಕಾಗಲ್ವಾ..? ಯಜಮಾನ ನಾಳೆಯೇ ರಿಲೀಸ್.