ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರ ಮಾಡುವವರಿಗೆ ಕೆಲವೊಂದು ಷರತ್ತುಗಳಿರುತ್ತವೆ. ಅದು ಹೀರೋ ಮತ್ತು ನಿರ್ಮಾಪಕರಿಗಷ್ಟೇ ಗೊತ್ತಿರುತ್ತವೆ. ಆದರೆ ದರ್ಶನ್ ಹಾಗಲ್ಲ. ಓಪನ್. ಓಪನ್ ಸೀಕ್ರೆಟ್.
ಸಾಮಾನ್ಯವಾಗಿ ಕಥೆಗೆ ಓಕೆ ಹೇಳಿ, ಕಾಲ್‍ಶೀಟ್ ಕೊಟ್ಟು, ಅಡ್ವಾನ್ಸ್ ಪಡೆದ ಮೇಲೆ ದರ್ಶನ್ ಮತ್ತೆ ಮತ್ತೆ ನಿರ್ದೇಶಕರ ಕೆಲಸದಲ್ಲಿ ಮೂಗು ತೂರಿಸೋದಿಲ್ಲ. ಅಲ್ಲಿಯವರಗೆ ತಮ್ಮ ಎಲ್ಲ ಅನುಮಾನಗಳನ್ನೂ, ಪ್ರಶ್ನೆಗಳನ್ನೂ ಎತ್ತಿ ಉತ್ತರ ಪಡೆದುಕೊಂಡುಬಿಟ್ಟಿರುತ್ತಾರೆ. ಅದಾದ ನಂತರ ದರ್ಶನ್, ನಿದೇಶಕರ ಪಾಲಿಗೆ ಮಣ್ಣಿನ ಗೊಂಬೆ. ಹೇಗೆ ಬೇಕಾದರೂ ಮಾಡಬಹುದು.
ಹೀಗಿರುವ ದರ್ಶನ್, ತಮ್ಮ ನಿರ್ಮಾಪಕರಿಗೆ ಹಾಕುವ ಕಂಡೀಷನ್ಸ್ ಇಷ್ಟೆ. ಸಿನಿಮಾದ ತಂತ್ರಜ್ಞರು, ಕಲಾವಿದರು ಕನ್ನಡದವರೇ ಇರಲಿ ಅನ್ನೋದು. ಬೇರೆ ಭಾಷೆಯಿಂದ ಟೆಕ್ನಿಷಿಯನ್ಸ್ ಕರೆದುಕೊಂಡು ಬರ್ತೀವಿ. ಅವರಿಗೆ ಇದು ಟೈಂಪಾಸ್ ಅಷ್ಟೆ. ಬದ್ಧತೆ ಇರಲ್ಲ. ಅದೇ ಚಾನ್ಸ್ ನಮ್ಮವರಿಗೆ ಕೊಟ್ರೆ, ಪ್ರೀತಿಯಿಂದ ಹೆಚ್ಚು ಜವಾಬ್ದಾರಿಯಿಂದ ಮಾಡ್ತಾರೆ. ಅವರಿಗೆ ಈ ಮಣ್ಣಿನ ಸೊಗಡೂ ಕೂಡಾ ಗೊತ್ತಿರುತ್ತೆ. ಇದು ನಾನು ಹಾಕುವ ಕಂಡೀಷನ್ಸ್.
ಹೀಗಾಗಿ ನಾನು ನನ್ನ ಚಿತ್ರದಲ್ಲಿ ಕನ್ನಡದ ಸಂಗೀತ ನಿರ್ದೇಶಕ, ಫೈಟ್ ಮಾಸ್ಟರ್, ಕ್ಯಾಮೆರಾ, ನೃತ್ಯ ನಿರ್ದೇಶಕ ಕನ್ನಡದವರೇ ಆಗಿರಬೇಕು ಎಂದು ಬಯಸುತ್ತೇನೆ. ಹಠ ಮಾಡುತ್ತೇನೆ. ಜಗಳ ಆಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ದರ್ಶನ್.
ಹೀಗಾಗಿಯೇ.. ಯಜಮಾನನ ಅಭಿಮಾನಿ ಬಳಗವೂ ದೊಡ್ಡದು. ಸ್ನೇಹಲೋಕವೂ ದೊಡ್ಡದು.