ಬಾಳೊಂದು ಹರಳೆಣ್ಣೆ ಪೇಟೆ..ಇಲ್ಲಿ ಒಬ್ಬೊಬ್ಬಂದ್ ಒಂದೊಂದು ತೀಟೆ... ಎಂದು ಶುರುವಾಗುತ್ತೆ ಹಾಡು. ಆಗೋಯ್ತು ಮರ್ಯಾದೆ ಸಸ್ತಾ ಮಾಲು.. ಎಂದು ಪಲ್ಲವಿ ಮುಗಿಯುತ್ತೆ. ಹಾಡಿರೋದು ವಿಜಯ್ ಪ್ರಕಾಶ್. ಬರೆದಿರೋದು ಭಟ್ಟರು. ಕುಣಿದಿರೋದು ದರ್ಶನ್ನು. ಈ ಎಲ್ಲರನ್ನೂ ಒಟ್ಟುಗೂಡಿಸಿರೋದು ಡೈರೆಕ್ಟರ್ ಹರಿಕೃಷ್ಣ ಮತ್ತು ನಿರ್ಮಾಪಕಿ ಶೈಲಜಾ ನಾಗ್.
ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..ಹತ್ ರುಪಾಯ್‍ಗೊಂದ್..
ಈಗಾಗಲೇ ಯಜಮಾನ ಚಿತ್ರದ ನಂದಿ.. ಶಿವನಂದಿ, ಬಸಣ್ಣಿ.. ಹೀಗೆ 4 ಹಾಡು ಹಿಟ್ ಆಗಿವೆ. 5ನೇ ಹಾಡು.. ಆ ದಾಖಲೆಗಳನ್ನೆಲ್ಲ ಚಿಂದಿ ಉಡಾಯಿಸಿ ಕಿಕ್ಕೇರಿಸುತ್ತಿದೆ. ಇನ್ನೊಂದ್ ದಿನ ಅಷ್ಟೆ.. ಮಾರ್ಚ್ 1ಕ್ಕೆ ಆ ಎಲ್ಲ ಕುತೂಹಲಕ್ಕೂ ಉತ್ತರ ಸಿಕ್ಕಿಬಿಡುತ್ತೆ.