ದರ್ಶನ್ ಜೊತೆ ನನಗಿದು ಮೊದಲನೇ ಸಿನಿಮಾ. ಈ ಮೊದಲು ಬಂದಿದ್ದ ಆಫರ್, ಡೇಟ್ಸ್ ಪ್ರಾಬ್ಲಂನಿಂದಾಗಿ ಕೈ ತಪ್ಪಿತ್ತು. ಈ ಬಾರಿ ಹಾಗಾಗಲಿಲ್ಲ. ಇಷ್ಟಿದ್ದರೂ, ಒಂದು ಆತಂಕ ಇದ್ದೇ ಇತ್ತು. ದರ್ಶನ್ ದೊಡ್ಡ ಸ್ಟಾರ್.. ಹೇಗೋ ಏನೋ.. ಎಂಬ ಆತಂಕವದು. ಆ ಆತಂಕ ಸೆಟ್ಟಿಗೆ ಹೋಗಿ ದರ್ಶನ್ ಜೊತೆ ಕುಳಿತ ಕೆಲವೇ ನಿಮಿಷಗಳಲ್ಲಿ ಮಾಯವಾಗಿ ಬಿಡ್ತು..
ದರ್ಶನ್ ಕುರಿತು ಉತ್ಸಾಹದಿಂದ ಹೀಗೆ ಹೇಳ್ತಾ ಹೋಗ್ತಾರೆ ರಶ್ಮಿಕಾ ಮಂದಣ್ಣ. ಯಜಮಾನ ಚಿತ್ರದಲ್ಲಿ ಆಕೆಯೇ ಯಜಮಾನಿ.. ಅರ್ಥಾತ್ ನಾಯಕಿ.
ದರ್ಶನ್‍ಗೆ ಅಹಂಕಾರವಿಲ್ಲ. ಎಲ್ಲರೊಂದಿಗೆ ಸರಳವಾಗಿ ಬೆರೆಯುವ ವ್ಯಕ್ತಿತ್ವ ಅವರದ್ದು ಎಂದಿದ್ದಾರೆ ರಶ್ಮಿಕಾ ಮಂದಣ್ಣ. ದರ್ಶನ್ ಮತ್ತು ನನ್ನ ಕೆಮಿಸ್ಟ್ರಿ ಅದ್ಭುತವಾಗಿದೆ. ತೆರೆ ಮೇಲೆ ಬಂದಾಗ ಕಾಮಿಡಿ, ರೊಮ್ಯಾನ್ಸ್ ಎಲ್ಲವೂ ಇದೆ. ನೋಡೋಕೆ ಚೆಂದ ಚೆಂದ. ದರ್ಶನ್ ಜೊತೆ ನಟಿಸುವುದೂ ಒಂದು ಒಳ್ಳೆಯ ಎಕ್ಸ್‍ಪೀರಿಯನ್ಸ್ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಶೈಲಜಾ ನಾಗ್ ನಿರ್ಮಾಣದ ಸಿನಿಮಾಗೆ ಹರಿಕೃಷ್ಣ, ಪಿ.ಕುಮಾರ್ ನಿರ್ದೇಶನವಿದೆ. ರಶ್ಮಿಕಾ ಜೊತೆ ತಾನ್ಯಾ ಹೋಪ್ ಕೂಡಾ ಚಿತ್ರದ ನಾಯಕಿ.