ಭೈರಾದೇವಿ. ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿ ನಟಿಸುತ್ತಿರುವ ಸಿನಿಮಾ. ಮೇಕಪ್ ಮೂಲಕ, ರಾಧಿಕಾ ಅವರ ಅಗಲವಾದ ಕಣ್ಣುಗಳ ಮೂಲಕ ಅಘೋರಿಯನ್ನಾಗಿ ತೋರಿಸುವುದು ಸುಲಭ. ಅದ್ಭುತ ನಟಿಯಾಗಿರುವ ರಾಧಿಕಾಗೆ ಅದು ಕಷ್ಟವೇನಲ್ಲ. ಆದರೆ.. ಧ್ವನಿ.
ಹೌದು, ಅಘೋರಿ ಪಾತ್ರಕ್ಕೆ ಧ್ವನಿ ಕರ್ಕಶವಾಗಿರಬೇಕು. ಗಟ್ಟಿಯಾಗಿರಬೇಕು. ಹೈ ಪಿಚ್‍ನಲ್ಲಿರಬೇಕು. ಹೀಗಾಗಿಯೇ ಅಘೋರಿ ಪಾತ್ರಕ್ಕೆ ನಿರ್ದೇಶಕ ಶ್ರೀ ಜೈ ಹೊಸ ಪ್ರಯತ್ನ ಮಾಡಿದ್ದಾರೆ. ಮಂಗಳಮುಖಿಯರನ್ನು ಕರೆಸಿ ಟೆಸ್ಟ್ ಮಾಡಿಸಿದ್ದಾರೆ. ಅವರಲ್ಲಿ ಭೂಮಿಕಾ ಎಂಬ ಮಂಗಳಮುಖಿಯ ಧ್ವನಿ ರಾಧಿಕಾ ಅವರ ಪಾತ್ರಕ್ಕೆ ಮ್ಯಾಚ್ ಆಗಿದೆ. ಅವರಿಗೇ ತರಬೇತಿ ನೀಡಿ ಡಬ್ಬಿಂಗ್ ಮಾಡಲು ನಿರ್ಧರಿಸಿದೆ ಭೈರಾದೇವಿ ಚಿತ್ರತಂಡ.