ಏನು ಮಾಡಲಿ ಹೊಡೀತು ಕಣ್ಣು.. ಎಂದು ಕಿಚ್ಚ ಹಾಡಿ ಕುಣಿಯುತ್ತಿದ್ದರೆ, ಕಣ್ಣು ಹೊಡೆಸಿಕೊಂಡ ಹುಡುಗಿ ಆಕಾಂಕ್ಷಾ ಸಿಂಗ್ ಕಣ್ಣು ಇರೋದೇ ಹೊಡೆಯೋಕೆ ಎಂಬಂತೆ ಹೆಜ್ಜೆ ಹಾಕಿದ್ದಾರೆ. ಇದು ಪೈಲ್ವಾನ್ ಚಿತ್ರದ ಐಟಂ ನಂಬರ್ ಪೆಪ್ಪಿ ನಂಬರ್ ಹಾಡು. ಮುಂಬೈನಲ್ಲಿ ಶೂಟಿಂಗ್ ಮುಗಿದಿದೆ.
ಬಾಲಿವುಡ್ ಸ್ಟಾರ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡೂ ಆಟದ ಕಥೆಯಿದೆ.