ಆಸ್ಪತ್ರೆ ಸೇರಿ, ಚಿಕಿತ್ಸೆಗೂ ಪರದಾಡುತ್ತಿರುವ ನಟಿ ವಿಜಯಲಕ್ಷ್ಮಿಗೆ ಮದಗಜ ಚಿತ್ರತಂಡ ನೆರವು ನೀಡಲು ಮುಂದಾಗಿದೆ. ಫಿಲಂ ಚೇಂಬರ್ ಪದಾಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ಮದಗಜ ಚಿತ್ರತಂಡ ವಿಜಯಲಕ್ಷ್ಮಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಲು ನಿರ್ಧರಿಸಿದೆ.
ಶ್ರೀಮುರಳಿ ಅಭಿನಯದ ಸಿನಿಮಾಗೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಕ. ಸದ್ಯಕ್ಕೆ ಕಲಾವಿದರು, ತಂತ್ರಜ್ಞರ ಆಯ್ಕೆಯಲ್ಲಿರುವ ಮಹೇಶ್ `ನನ್ನ ಚಿತ್ರದಲ್ಲಿ ವಿಜಯಲಕ್ಷ್ಮಿ ಅವರಿಗಾಗಿ ಪ್ರಧಾನ ಪಾತ್ರವೊಂದನ್ನು ನೀಡುತ್ತಿದ್ದೇನೆ. ಆ ಪಾತ್ರದ ನಂತರ ಖಂಡಿತಾ ಅವರಿಗೆ ಇನ್ನಷ್ಟು ಮತ್ತಷ್ಟು ಅವಕಾಶಗಳು ಸಿಗಲಿವೆ'' ಎಂದಿದ್ದಾರೆ.