ತ್ರಯಂಬಂಕಂ. ದಯಾಳ್ ಪದ್ಮನಾಭ್ ಸಿನಿಮಾ. ಟ್ರೇಲರ್ ರಿಲೀಸ್ ಆಗಿದೆ. ಇದೊಂದು ಪಕ್ಕಾ ಸೈಕಲಾಜಿಕಲ್ ಥ್ರಿಲ್ಲರ್. ನೋ ಡೌಟ್. ವಿಜಯನಗರ ಕಾಲದ ಕಥೆಯಿಂದ ಶುರುವಾಗುವ ಕಥೆ, ಯಾವುದೋ ಪಾಷಾಣದ ಬೆನ್ನು ಹತ್ತುವ ಪತ್ರಕರ್ತೆ, ಮಗಳಿಗೆ ಆಕ್ಸಿಡೆಂಟ್ ಆಗಿಯೇ ಬಿಡುತ್ತೆ ಎಂದು ಭಾವಿಸಿ ಟೆನ್ಷನ್ ಆಗುವ ಅಪ್ಪ.. ಹೀಗೆ ಹೆಜ್ಜೆ ಹೆಜ್ಜೆಗೂ ತ್ರಯಂಬಕಂ ಸಿನಿಮಾ ಥ್ರಿಲ್ ಕೊಡುತ್ತಾ ಹೋಗುತ್ತೆ.
ನಿರ್ದೇಶಕ ದಯಾಳ್, ಟ್ರೇಲರ್‍ನಲ್ಲಿ ಮೊದಲ ಗೆಲುವು ದಾಖಲಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್, ಚಿತ್ರದ ಅತಿದೊಡ್ಡ ಅಟ್ರ್ಯಾಕ್ಷನ್. ಆರ್.ಜೆ.ರೋಹಿತ್ ಅವರಿಗೆ ಇಲ್ಲಿ ಡಿಟೆಕ್ಟಿವ್ ಪಾತ್ರವಿದೆ.
ಇದು ಕಾಮನ್ ಸಿನಿಮಾ ಅಲ್ಲ. ಒಳ್ಳೆ ಘಟನೆಯನ್ನ ಚೆನ್ನಾಗಿ ತೋರಿಸಿದ್ದಾರೆ. ಥಿಯೇಟರಿನಿಂದ ಹೊರಬಂದ ಮೇಲೆ ಯಾರು ಹೀರೋ ಅನ್ನೋದು ನಿಮಗೆ ಗೊತ್ತಾಗಲ್ಲ. ಒಂದು ಹೊಸ ಅನುಭವ ಎಂದಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.