ಯಜಮಾನ ರಿಲೀಸ್ ಆಗೋದು ಮಾರ್ಚ್ 1ಕ್ಕೆ. ದರ್ಶನ್ ಅಭಿನಯದ ತಾರಕ್ ರಿಲೀಸ್ ಆಗಿದ್ದು ಸೆಪ್ಟೆಂಬರ್ 29, 2017ರಲ್ಲಿ. ಅದಾದ ನಂತರ ದರ್ಶನ್ ಅಭಿನಯದ ಚಿತ್ರ ರಿಲೀಸ್ ಆಗಿಲ್ಲ. 2018 ಅಂತೂ ದರ್ಶನ್ ಅಭಿಮಾನಿಗಳಿಗೆ ಬರ. ಆ ಬರ ಮಾರ್ಚ್ 1ಕ್ಕೆ ನೀಗುತ್ತಿದೆ.
ಈಗ ದರ್ಶನ್ ಅಭಿನಯದ ಸಿನಿಮಾ ಜೊತೆಗೆ ದರ್ಶನ್ ನನ್ನ ತಮ್ಮ ಎಂದು ಹೆಮ್ಮೆಯಿಂದ ಹೇಳಿಕೊಳ್ಳೋ ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಚಿತ್ರದ ಟ್ರೇಲರ್ ಕೂಡಾ ಬರಲಿದೆ.
ಯಜಮಾನ ಚಿತ್ರದ ಜೊತೆಯಲ್ಲೇ ಅಭಿಷೇಕ್ ಅಂಬರೀಷ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯಜಮಾನ ಚಿತ್ರದ ನಾಯಕಿಯರಲ್ಲಿ ಒಬ್ಬರಾಗಿರೋ ತಾನ್ಯ ಹೋಪ್, ಅಮರ್‍ಗೆ ಹೀರೋಯಿನ್. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾಗೆ ನಾಗಶೇಖರ್ ನಿರ್ದೇಶಕ. ಅಂದಹಾಗೆ ಅಮರ್ ಚಿತ್ರದಲ್ಲಿ ದರ್ಶನ್ ಕೂಡಾ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.