` ರಾಘಣ್ಣ ಕಂ ಬ್ಯಾಕ್ - ಅಪ್ಪು ಹೇಳಿದ್ದೇನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth rjkumar talks about trayambakam
Raghavendra, Puneeth Rajkumar

ಅದು ತ್ರಯಂಬಕಂ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ. ಅಪ್ಪಟ ಶಿವನಂತೆ ಢಮರುಗ ಬಾರಿಸಿ ಟ್ರೇಲರ್ ರಿಲೀಸ್ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಣ್ಣ ಮತ್ತೆ ಬಣ್ಣ ಹಚ್ಚಿರುವ ಬಗ್ಗೆ ಮಾತನಾಡುತ್ತಾ ಹೋದ ಪುನೀತ್ ``ನಂಗೆ ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ಪಿಲ್ಲರ್‍ಗಳಿದ್ದಂತೆ. ರಾಘಣ್ಣ ಮತ್ತೆ ನಟಿಸುತ್ತಿದ್ದಾರೆ ಎನ್ನುವುದೇ ನನಗೆ ಖುಷಿ. ನಾಲ್ಕೈದು ವರ್ಷಗಳ ಹಿಂದೆ ರಾಘಣ್ಣ ಆರೋಗ್ಯ ಹದಗೆಟ್ಟಾಗ, ಅವರು ಮತ್ತೆ ಬಣ್ಣ ಹಚ್ಚುತ್ತಾರೆ ಎಂಬ ಕಲ್ಪನೆಯೂ ನಮಗಿರಲಿಲ್ಲ.

ಅಣ್ಣನಿಗೆ ಎಷ್ಟು ಖುಷಿಯಾಗಿದ್ಯೋ ಅದರ 10 ಪಟ್ಟು ಖುಷಿ ನನಗಾಗಿದೆ'' ಎಂದಿದ್ದಾರೆ ಪುನೀತ್.

I Love You Movie Gallery

Rightbanner02_butterfly_inside

Yaana Movie Gallery