ಬಸಣ್ಣಿ ಬಾ.. ಅನ್ನೋ ಹಾಡು ಈಗ ವೈರಲ್. ಎಲ್ಲ ಕಡೆ ಫೇಮಸ್. ಯಜಮಾನ ಚಿತ್ರದ ಎಲ್ಲ ಹಾಡುಗಳೂ ಹಿಟ್. ಬಸಣ್ಣಿ ಹಾಡು ಸೂಪರ್ ಹಿಟ್. ಆ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ತಾನ್ಯಾ ಹೋಪ್. ತಾನ್ಯಾಗೆ ಇದು ಕನ್ನಡದಲ್ಲಿ ಮೊದಲ ಸಿನಿಮಾ ಏನಲ್ಲ. ಆದರೆ, ರಿಲೀಸ್ ಆಗುತ್ತಿರುವ ಫಸ್ಟ್ ಸಿನಿಮಾ ಯಜಮಾನ.
ಈ ಚಿತ್ರದ ಆಫರ್ ಬಂದಾಗ ತಾನ್ಯಾ ಹೋಪ್, ಉಪೇಂದ್ರ ಜೊತೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸುತ್ತಿದ್ದರು. ನಿರ್ಮಾಪಕಿ ಶೈಲಜಾ ನಾಗ್ ಯಜಮಾನ ಚಿತ್ರದ ಆಫರ್ ಕೊಟ್ಟಾಗ, ಹೀರೋ ದರ್ಶನ್ ಎಂದು ಕೇಳಿಯೇ ಓಕೆ ಎಂದುಬಿಟ್ರಂತೆ ತಾನ್ಯಾ ಹೋಪ್.
`ನಾನು ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ ಮಾಡಿದ್ದೇನೆ. ಗಂಗಾ ನನ್ನ ಹೆಸರು. ದರ್ಶನ್ ಪಾತ್ರದ ಒಂದು ಯೋಜನೆಗೆ ನಾನು ಸಹಾಯ ಮಾಡುತ್ತೇನೆ. ದರ್ಶನ್ ರೊಮ್ಯಾನ್ಸ್ ಮಾಡೋದು ರಶ್ಮಿಕಾ ಜೊತೆ. ಇನ್ನು ಬಸಣ್ಣಿ ಹಾಡು, ಕನಸಿನಲ್ಲಿ ಬರುವಂತ ಹಾಡು' ಅಂತಾರೆ ತಾನ್ಯಾ.
ಸದ್ಯಕ್ಕೀಗ ತಾನ್ಯಾ ಎಲ್ಲಿ ಹೋದರೂ ಬಸಣ್ಣಿ ಎಂದೇ ಗುರುತಿಸುವಷ್ಟರಮಟ್ಟಿಗೆ ಹಾಡು ಫೇಮಸ್ ಆಗಿದೆ. ಶೈಲಜಾ ನಾಗ್, ದರ್ಶನ್, ಹರಿಕೃಷ್ಣ, ಕುಮಾರ್.. ಹೀಗೆ ಚಿತ್ರದಲ್ಲಿ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬರೂ ನನಗೆ ಹೊಸ ಹೊಸ ವಿಷಯ ಕಲಿಸಿಕೊಟ್ಟಿದ್ದಾರೆ ಎಂದು ಕೃತಜ್ಞತೆಯಿಂದ ಸ್ಮರಿಸ್ತಾರೆ ತಾನ್ಯಾ ಹೋಪ್.