ನಾಗಮಂಡಲ, ಸೂರ್ಯವಂಶ, ಜೋಡಿಹಕ್ಕಿ.. ಮೊದಲಾದ ಚಿತ್ರಗಳಲ್ಲಿ ನಟಿಸಿ, ಕನ್ನಡಿಗರ ಮನಸೂರೆಗೊಂಡಿದ್ದ ನಟಿ ವಿಜಯಲಕ್ಷ್ಮಿ ಈಗ ಆಸ್ಪತ್ರೆ ಸೇರಿದ್ದಾರೆ. ಅನಾರೋಗ್ಯಕ್ಕೊಳಗಾಗಿರುವ ವಿಜಯಲಕ್ಷ್ಮಿ, ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕಿತ್ಸೆಗೂ ಹಣವಿಲ್ಲದೆ ಪರದಾಡುವಂತಾಗಿದೆ.
ವೈಯಕ್ತಿಕ ಬದುಕಿನಲ್ಲಿ ನಾನಾ ತೊಂದರೆ ಎದುರಿಸಿದ ವಿಜಯಲಕ್ಷ್ಮಿ, ಚಿತ್ರರಂಗದಲ್ಲಿ ಮಿಂಚಿದಷ್ಟೇ ವೇಗವಾಗಿ ನೇಪಥ್ಯಕ್ಕೆ ಸರಿದುಬಿಟ್ಟರು. ಇತ್ತೀಚೆಗೆ ನನಗೆ ಆರ್ಥಿಕ ಸಂಕಷ್ಟವಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ವಿಜಯಲಕ್ಷ್ಮಿ, ಪೋಷಕ ಪಾತ್ರ ಮಾಡಲೂ ಕೂಡಾ ನಾನು ಸಿದ್ಧ ಎಂದು ಹೇಳಿದ್ದರು. ಆದರೆ, ಚಿತ್ರರಂಗದಲ್ಲಿ ಅವಕಾಶಗಳ ಕೊರತೆ ನೀಗಲೇ ಇಲ್ಲ.
ಈಗ ಆಸ್ಪತ್ರೆ ಸೇರಿರುವ ವಿಜಯಲಕ್ಷ್ಮಿ ಚೇತರಿಸಿಕೊಳ್ಳುತ್ತಿದ್ದು, ಚಿತ್ರರಂಗದವರೇ ಯಾರಾದರೂ ನೆರವು ನೀಡಿ ಎಂದು ವಿಜಯಲಕ್ಷ್ಮಿ ಸೋದರಿ ಉಷಾ ಬೇಡಿಕೊಂಡಿದ್ದಾರೆ.