ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಮಿಠಾಯಿ ಸೂರಿ ಅನ್ನೋ ಪಾತ್ರವಿದೆ. ಆ ಪಾತ್ರ ಮಾಡಿರೋದು ಡಾಲಿ ಧನಂಜಯ್. ಟಗರು ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿ ಬೊಬ್ಬಿರಿದಿದ್ದ ಧನಂಜಯ್, ಇಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದಾರೆ. ಮಿಠಾಯಿ ಸೂರಿಯಾಗಿದ್ದಾರೆ.
`ನನ್ನದು ಮಿಠಾಯಿ ಸೂರಿ ಪಾತ್ರ. ಹುಂಬತನವೇ ಮೈವೆತ್ತಿಕೊಂಡಿರುವ ಕ್ಯಾರೆಕ್ಟರ್. ಸಿಕ್ಕಾಪಟ್ಟೆ ಕಿರಿಕ್ ಮಾಡುತ್ತೆ. ಆದರೆ ವಿಲನ್ ಅಲ್ಲ' ಎನ್ನುವ ಧನಂಜಯ್ ಅವರಿಗೆ ಅದೊಂದೇ ಬೇಜಾರು.
ಮಿಠಾಯಿ ಸೂರಿಗೆ ಮಿಠಾಯಿ ತಿನ್ನಿಸೋರೇ ಇಲ್ಲ. ಸಿಂಗಲ್. ಅರ್ಥಾತ್.. ಮಿಠಾಯಿ ಸೂರಿಗೆ ಹೀರೋಯಿನ್ ಇಲ್ಲ.
ಯಜಮಾನ ಚಿತ್ರ ಮಾರ್ಚ್ 1ರಂದು ತೆರೆಗೆ ಬರುತ್ತಿದ್ದು, ಭರ್ಜರಿ ಓಪನಿಂಗ್ ಎದುರು ನೋಡುತ್ತಿದೆ.