` ಧ್ರುವ ಸರ್ಜಾ ಎದುರು ಮಯೂರಿ ಪೊಗರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mayuri joins pogaru team
Mayuri

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ಮತ್ತೊಂದು ತಾರೆ ಸೇರಿಕೊಂಡಿದೆ. ಮಯೂರಿ ಚಿತ್ರದ ತಾರಾಬಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಶೂಟಿಂಗ್‍ನಲ್ಲಿ ಮಯೂರಿ ಭಾಗಿಯಾಗಿದ್ದಾರೆ. ಚಿತ್ರದಲ್ಲಿ ಮಯೂರಿಯದ್ದು ಧ್ರುವ ಸರ್ಜಾ ತಂಗಿ ಪಾತ್ರವಂತೆ. ಈಗಾಗಲೇ ಶಿವಣ್ಣನಿಗೆ ತಂಗಿಯಾಗಿ ನಟಿಸಿರುವ ಮಯೂರಿ, ಈಗ ಧ್ರುವ ಸರ್ಜಾಗೂ ತಂಗಿಯಾಗಿದ್ದಾರೆ.

ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್, ಜಗಪತಿ ಬಾಬು, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದು, ಸ್ಟಾರ್ ಸಿನಿಮಾ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪೊಗರಿನ ಖದರು ಜೋರಾಗುತ್ತಲೇ ಇದೆ.

Matthe Udbhava Trailer Launch Gallery

Maya Bazaar Pressmeet Gallery