ಸಾರಥಿ, ದರ್ಶನ್ ಅಭಿನಯದ ಬ್ಲಾಕ್‍ಬಸ್ಟರ್ ಸಿನಿಮಾ. ಆ ಚಿತ್ರದಲ್ಲಿ ಗಮನ ಸೆಳೆದೆದ್ದುದು ಕಣಿವೆಯಲ್ಲಿ ಗೂಳಿಗಳ ಓಟ. ಚಿತ್ರದ ಹೈಲೈಟ್‍ಗಳಲ್ಲಿ ಅದೂ ಒಂದಾಗಿತ್ತು. ಅದು ಮತ್ತೆ ಯಜಮಾನನಲ್ಲಿ ಮರುಕಳಿಸಿದೆ. ಯಜಮಾನ ಚಿತ್ರದಲ್ಲಿ 10 ಜಲ್ಲಿಕಟ್ಟು ಗೂಳಿಗಳನ್ನು ಬಳಸಿಕೊಳ್ಳಲಾಗಿದೆ.
ತಮಿಳುನಾಡಿನಿಂದ ಜಲ್ಲಿಕಟ್ಟುಗಾಗಿಯೇ ತಯಾರು ಮಾಡಿದ ಕಟ್ಟುಮಸ್ತಾದ 10 ಗೂಳಿಗಳನ್ನು ದಿನಕ್ಕೆ 10 ಸಾವಿರದಂತೆ ಬಾಡಿಗೆ ಕೊಟ್ಟು ಕರೆಸಿಕೊಂಡು ಚಿತ್ರೀಕರಣ ಮಾಡಿದೆ ಚಿತ್ರತಂಡ. ಯಜಮಾನ ಚಿತ್ರದ ಹೈಲೈಟ್ ಅದು.
ಮಾರ್ಚ್ 1ಕ್ಕೆ ರಿಲೀಸ್ ಆಗುತ್ತಿರುವ ಯಜಮಾನ ಚಿತ್ರದ ಅತಿದೊಡ್ಡ ಹೈಲೈಟ್ ಈ ಜಲ್ಲಿಕಟ್ಟು ಗೂಳಿಗಳು. ಚಿತ್ರದಲ್ಲಿ ದರ್ಶನ್ ನಂದಿಯ ಎದುರು ನಿಂತಿರುವುದಕ್ಕೂ, ಈ ಗೂಳಿಗಳಿಗೂ ಸಂಬಂಧವಿದೆ ಎನ್ನಿಸಿದ್ರೆ ಅಚ್ಚರಿಯಿಲ್ಲ.
ಬಿ.ಸುರೇಶ್, ಶೈಲಜಾ ನಾಗ್ ನಿರ್ಮಾಣದ ಚಿತ್ರಕ್ಕೆ ಹರಿಕೃಷ್ಣ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕ. ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಚಿತ್ರ ಬಿಡುಗಡೆಗೂ ಮುನ್ನವೇ ಭರ್ಜರಿ ಹವಾ ಎಬ್ಬಿಸಿದೆ. ದರ್ಶನ್ ಸಿನಿಮಾ ಹೆಚ್ಚೂ ಕಡಿಮೆ ಎರಡು ವರ್ಷದ ಗ್ಯಾಪ್ ನಂತರ ತೆರೆಗೆ ಬರುತ್ತಿರುವುದೇ ಅಭಿಮಾನಿಗಳಿಗೆ ಹಬ್ಬ.