` ಕನ್ನಡಲ್ಲಿ ಕ್ವಾಲಿಟಿ ಸಿನಿಮಾಗಳು ಬರಲಿ - ಸಿಎಂ ಹೆಚ್.ಡಿ.ಕುಮಾರಸ್ವಾಮಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
cm ha kumaraswamy at biffes inaguration
CM HD Kumaraswamy

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಿದೆ. ಬೆಂಗಳೂರಿನ ಒರಾಯನ್ ಮಾಲ್ ಮತ್ತು ಕಲಾವಿದರ ಸಂಘದಲ್ಲಿ 60 ದೇಶಗಳ 125ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಫೆಬ್ರವರಿ 28ರವರೆಗೆ ಈ ಚಲನಚಿತ್ರೋತ್ಸವ ನಡೆಯಲಿದೆ. 

biffes_inauguration_2019.jpgವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ `ಕನ್ನಡದಲ್ಲಿ ವರ್ಷಕ್ಕೆ 200ಕ್ಕೂ ಹೆಚ್ಚು ಸಿನಿಮಾ ಬರುತ್ತಿವೆ. ಆದರೆ, ಗುಣಮಟ್ಟದ ಸಿನಿಮಾಗಳು ಬರುತ್ತಿಲ್ಲ. ಮೊದಲು ಒಳ್ಳೆಯ ಕತೆ ಮಾಡಿಕೊಂಡು, ಅದ್ಧೂರಿಯಾಗಿ ಸಿನಿಮಾ ಮಾಡಬೇಕು. ಆದರೆ, ಕಥೆಯನ್ನೇ ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿರುವ ಚಲನಚಿತ್ರ ಮಂದಿರಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ರು. ಈ ಬಾರಿಯ ಬಜೆಟ್‍ನಲ್ಲಿ ಚಿತ್ರರಂಗಕ್ಕೆ ಯಾವುದೇ ಅನುದಾನ ದೊರೆತಿಲ್ಲ. ಇದೇ ವೇದಿಕೆ ಮೇಲೆ ಸಿಎಂ ಜೊತೆ ಮಾತನಾಡಿದ್ದೇನೆ. ಅವರೂ ಕೂಡಾ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿಕೊಂಡರು.

ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ, ಅನಂತ್ ನಾಗ್, ರಮೇಶ್ ಭಟ್, ಶಿವರಾಂ. ವಿ.ಮನೋಹರ್, ರಿಷಬ್ ಶೆಟ್ಟಿ, ಗಾಯತ್ರಿ ಅನಂತ್ ನಾಗ್, ಸುಮನ್ ನಗರ್‍ಕರ್, ಹೇಮಾಚೌಧರಿ ಮೊದಲಾದವರು ಭಾಗವಹಿಸಿದ್ದರು.

Geetha Movie Gallery

Ombattane Dikku Launch Meet Gallery