`ನಾನು ದರ್ಶನ್ ಜೊತೆ ಒಂದಲ್ಲ.. 4 ಸಿನಿಮಾಗಳಲ್ಲಿ ನಟಿಸಿದ್ದೇನೆ. ದರ್ಶನ್ ಬೇರೆಯವರ ಹಾಗಲ್ಲ. ಸಾಮಾನ್ಯವಾಗಿ ಬೇರೆ ಚಿತ್ರಗಳಲ್ಲಿ ಪೋಷಕ ನಟರ ರೋಲ್‍ಗಳನ್ನು ಎಡಿಟ್ ಮಾಡಿಬಿಡುತ್ತಾರೆ. ಹೆಚ್ಚು ಕಾಣಿಸಿಕೊಳ್ಳೋಕೇ ಬಿಡಲ್ಲ. ಆದರೆ ದರ್ಶನ್ ಹಾಗಲ್ಲ' ಯಜಮಾನನ ಸುದ್ದಿಗೋಷ್ಠಿಯಲ್ಲಿ ದರ್ಶನ್ ಬಗ್ಗೆ ಮಾತನಾಡುತ್ತಾ ಹೋದ ದೇವರಾಜ್, ದರ್ಶನ್‍ರ ಇನ್ನೊಂದು ಮುಖ ಪರಿಚಯ ಮಾಡಿಸಿದ್ರು.
ದರ್ಶನ್, ಚಿತ್ರರಂಗಕ್ಕೆ ದೊಡ್ಡ ಆಲದ ಮರ ಇದ್ದಹಾಗೆ. ಗುಣ, ವ್ಯಕ್ತಿತ್ವ ತುಂಬಾ ಡಿಫರೆಂಟ್. ಆಲದ ಮರ ಹಲವರಿಗೆ ಆಸರೆ ನೀಡುವಂತೆ, ದರ್ಶನ್ ಕೂಡಾ ಹಲವರನ್ನು ಪೋಷಿಸುತ್ತಾ ಬೆಳೆಯುತ್ತಿದ್ದಾರೆ ಅಂತಾರೆ ದೇವರಾಜ್.