ಆನೆ ನಡೆದದ್ದೇ ದಾರಿ.. ಅದು ದರ್ಶನ್ ಅವರಿಗಷ್ಟೆ ಒಪ್ಪುವ ಮಾತು. ಆದರೆ, ಅದು ಒಂದಲ್ಲ.. ಎರಡು ಆನೆ ಇದ್ದಂತೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ಯಜಮಾನನ ನಿರ್ಮಾಪಕಿ ಶೈಲಜಾ ನಾಗ್.
`ಆನೆ ನಡೆದದ್ದೇ ದಾರಿ ಅಂತಾರೆ. ಆದರೆ, ದರ್ಶನ್ ಎರಡು ಆನೆ ಇದ್ದ ಹಾಗೆ. ಕ್ರೇಜ್ ಅಂತೀವಲ್ಲ.. ಆ ಕ್ರೇಜ್‍ನ ಅಪ್ಪನ ಅಪ್ಪ ದರ್ಶನ್. ಚಿತ್ರದ ಟ್ರೇಲರ್, ಹಾಡುಗಳು ಹಿಟ್ ಆಗಿವೆ. ಈ ಮಟ್ಟಿಗೆ ಸಿನಿಮಾ ಕ್ರೇಜ್ ಸೃಷ್ಟಿಯಾಗ್ತಿರೋದಕ್ಕೆ ದರ್ಶನ್ ಅವರೇ ಕಾರಣ' ಎಂದಿದ್ದಾರೆ ಶೈಲಜಾ ನಾಗ್.
ಮಾರ್ಚ್ 1ಕ್ಕೆ ರಿಲೀಸ್ ಆಗುತ್ತಿರುವ ಯಜಮಾನ, ಕನ್ನಡದಲ್ಲಿ ಮಾತ್ರವೇ ಬರುತ್ತಿದ್ದಾನೆ. ಹೊರ ರಾಜ್ಯ, ವಿದೇಶಗಳಲ್ಲೂ ತೆರೆ ಕಾಣುತ್ತಿದ್ದಾನೆ. ಸ್ವತಃ ಶೈಲಜಾ ನಾಗ್ ಅವರೇ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.