ಗಜ, ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಈಗ ಮತ್ತೊಮ್ಮೆ ಗಜನಾಗುತ್ತಿದ್ದಾರೆ ದರ್ಶನ್. ಅದೂ ಒಡೆಯ ಚಿತ್ರದಲ್ಲಿ. ನಾಲ್ವರು ತಮ್ಮಂದಿರ ಅಣ್ಣನಾಗಿ ನಟಿಸುತ್ತಿರುವ ಒಡೆಯ ಚಿತ್ರದಲ್ಲಿ ದರ್ಶನ್ ಅವರನ್ನು ಎಲ್ಲರೂ ಪ್ರೀತಿಯಿಂದ ಗಜ ಎಂದೇ ಕರೆಯುತ್ತಾರಂತೆ.
ಅಭಿಮಾನಿಗಳು, ದರ್ಶನ್‍ರನ್ನು ಪ್ರೀತಿಯಿಂದ ಕರೆಯೋ ಹೆಸರುಗಳಲ್ಲಿ ಗಜ ಕೂಡಾ ಒಂದು. ಹೀಗಾಗಿ ದರ್ಶನ್‍ಗೆ ಮತ್ತೊಮ್ಮೆ ಗಜ ನಾಮಬಲ ಸಿಕ್ಕಿದೆ. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾಗೆ ಎಂ.ಡಿ.ಶ್ರೀಧರ್ ನಿರ್ದೇಶನವಿದೆ.