ಯಜಮಾನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ದರ್ಶನ್‍ಗೆ ರಶ್ಮಿಕಾ ಮಂದಣ್ಣ ಜೋಡಿ. ಇದೇ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಶಂಕರ್ ಅಶ್ವತ್ಥ್. ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಶಂಕರ್ ಅಶ್ವತ್ಥ್, ನನಗೂ ರಶ್ಮಿಕಾರಂತಹ ಮಗಳಿರಬೇಕಿತ್ತು ಎಂದಿರಬೇಕಿತ್ತು.
ಆಗಿದ್ದಿಷ್ಟೆ, ಶೂಟಿಂಗ್ ವೇಳೆ ಶಂಕರ್ ಅಶ್ವತ್ಥ್ ಭುಜದ ನೋವಿನಿಂದ ಬಳಲುತ್ತಿದ್ದರಂತೆ. ಸುಸ್ತಾಗಿ ಕುಳಿತಿದ್ದಾಗ ರಶ್ಮಿಕಾ ಮಂದಣ್ಣ, ಶಂಕರ್ ಅಶ್ವತ್ಥ್ ಅವರ ಭುಜಗಳನ್ನು ಒತ್ತಿ, ಮಸಾಜ್ ಮಾಡಿದ್ರಂತೆ. ರಶ್ಮಿಕಾ ಹಾಗೆ ಭುಜಗಳನ್ನು ಒತ್ತುತ್ತಿದ್ದಾಗ, ನನಗೂ ಇಂತಹ ಮಗಳಿರಬೇಕಿತ್ತು ಎನ್ನಿಸಿತು ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್.
ಇದು ನನಗೆ ಸಿಕ್ಕ ಅತಿದೊಡ್ಡ ಉಡುಗೊರೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಅಷ್ಟೇ ಅಲ್ಲ, ಅಪ್ಪನ ಪ್ರೀತಿಯ ಎದುರು ಮಗಳು ಖಂಡಿತಾ ಕಣ್ಣೀರಾಗುತ್ತಾಳೆ. ಅಷ್ಟು ಸಣ್ಣ ಕೆಲಸಕ್ಕೆ ನೀವು ನನಗೆ ಮಗಳ ಸ್ಥಾನ ಕೊಟ್ಟಿರಿ. ಥ್ಯಾಂಕ್ಯೂ ಅಪ್ಪಾ ಎಂದಿದ್ದಾರೆ.