ಅವನು ಕನಸು ಮತ್ತು ವಾಸ್ತವದ ನಡುವೆ, ಯಾವುದು ಸತ್ಯ ಎಂಬುದೇ ಗೊತ್ತಿಲ್ಲದ ಹುಡುಗ. ಇವಳೋ.. ಅಪ್ಪ ಅಮ್ಮ ಇಲ್ಲದ ಅನಾಥೆ. ಇವರಿಬ್ಬರಿಗೂ ಮದುವೆ ಮಾಡೋದು ಹುಡುಗಿಯ ಫ್ರೆಂಡ್ಸು. ಮುಂದ.. ಅಲ್ಲೇ ಇರೋದು ಥ್ರಿಲ್ಲು. ಆ ಥ್ರಿಲ್ ಹೇಗಿದೆ ಅನ್ನೋದನ್ನ ಸ್ಟ್ರೈಕರ್ ಚಿತ್ರ ನೋಡಿಯೇ ತಿಳ್ಕೋಬೇಕು.
ಶಿಲ್ಪಾ ಮಂಜುನಾಥ್ ಅನಾಥ ಹುಡುಗಿಯಾಗಿ, ಪ್ರವೀಣ್ ತೇಜ್ ಭ್ರಮಾಲೋಕದ ಹುಡುಗನಾಗಿ ನಟಿಸಿದ್ದಾರೆ. ತಮಿಳಿನ ಕಾಳಿ ಚಿತ್ರದ ಶೂಟಿಂಗ್ ವೇಳೆ, ನಟ ಪ್ರವೀಣ್ ತೇಜ್ ನನ್ನನ್ನು ನಿರ್ದೇಶಕ, ನಿರ್ಮಾಪಕರಿಗೆ ಪರಿಚಯ ಮಾಡಿಸಿದ್ದರು. ಕಥೆ ಇಷ್ಟವಾಗಿತ್ತು. ಆದರೆ, ಆರಂಭದಲ್ಲೇ ನಿರ್ಮಾಪಕರು, ನಿರ್ದೇಶಕರ ಜೊತೆ ಜಗಳ ಮಾಡಿಕೊಂಡಿದ್ದೆ. ಆಮೇಲೆ ಮಿಸ್ ಅಂಡರ್ ಸ್ಟಾಂಡಿಂಗ್ ಸರಿ ಹೋಯ್ತು. ಆದರೆ, ಸಿನಿಮಾ ಮುಗಿಯುವ ಹೊತ್ತಿಗೆ ಎಲ್ಲವೂ ಸುಸೂತ್ರವಾಗಿ ಹೋಗಿತ್ತು ಅಂಥಾರೆ ಶಿಲ್ಪಾ ಮಂಜುನಾಥ್. ಸ್ಟ್ರೈಕರ್ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ.