ಟಗರು ಚಿತ್ರ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾ. ಕೆ.ಪಿ.ಶ್ರೀಕಾಂತ್ ಈ ಚಿತ್ರದ ನಿರ್ಮಾಪಕ. ಅದಾದ ಮೇಲೆ ನಿರ್ದೇಶಕ ಸೂರಿ ಜೊತೆ ಪಾಪ್‍ಕಾರ್ನ್ ಮಂಕಿಟೈಗರ್ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದ ಶ್ರೀಕಾಂತ್ ಈಗ ಆ ಚಿತ್ರದಿಂದ ಹೊರಬಂದಿದ್ದಾರಂತೆ. ಸುಧೀರ್ ಈಗ ಸೂರಿಯ ಹೊಸ ಚಿತ್ರದ ನಿರ್ಮಾಪಕರಾಗಿದ್ದಾರಂತೆ.
ಧನಂಜಯ್, ನಿವೇಧಿತಾ, ಅಮೃತಾ, ಸಪ್ತಮಿ ನಟಿಸುತ್ತಿರುವ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಆದರೆ, ಶ್ರೀಕಾಂತ್ ಚಿತ್ರದ ನಿರ್ಮಾಣದಿಂದ ಹಿಂದೆ ಸರಿದಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಶ್ರೀಕಾಂತ್ ಇದೇ ಕಾರಣ ಎಂದು ಹೇಳಿಕೊಂಡಿಲ್ಲ.
ಮುಂದಿನ ದಿನಗಳಲ್ಲಿ ಸೂರಿ ಜೊತೆ ಬೇರೆ ಸಿನಿಮಾ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಶ್ರೀಕಾಂತ್.