ರವಿಶಂಕರ್ ಅಂದ್ರೆ ರೌಡಿಸಂ. ರವಿಶಂಕರ್ ಅಂದ್ರೆ ಕೊಲೆ, ದರೋಡೆ, ಹೊಡೆದಾಟ, ಗ್ಯಾಂಗು, ಕಿಡ್ನಾಪು, ರೇಪು.. ಇನ್ನೊಂದು ಕಡೆ ಕಾಮಿಡಿ.. ಹೀಗೆ ನವರಸಗಳನ್ನೂ ಅರೆದು ಕುಡಿದಂತೆ ನಟಿಸುತ್ತಾ ಕನ್ನಡಿಗರ ಮೆಚ್ಚಿನ ಆರ್ಮುಗಂ ಆಗಿರುವ ರವಿಶಂಕರ್, ಈಗ ಸದ್ಗುಣ ಸಂಪನ್ನರಾಗಿದ್ದಾರೆ. ಅರೆ.. ಅವರು ಕೆಟ್ಟೋವ್ರಾಗೇ ಇರಬೇಕು ಕಣ್ರಿ, ನೋಡಾಕ್ ಚೆಂದ ಅಂದ್ಕೊಂಡ್ರೆ, ವೇಯ್ಟ್. ಇದು ಅವರ ಹೊಸ ಚಿತ್ರದ ಹೆಸರು.
`ಸದ್ಗುಣ ಸಂಪನ್ನ ಮಾಧವ 100%' ಅನ್ನೋ ಹೊಸ ಸಿನಿಮಾ ಶುರುವಾಗಿದೆ. ನಾದಬ್ರಹ್ಮ ಹಂಸಲೇಖ ಅವರಿಂದ ಪೋಸ್ಟರ್ ಲಾಂಚ್ ಆಗಿದೆ. ಭಾಮ ಗಿರೀಶ್ ಮತ್ತು ಪೂಜಾ ನಾಗರಾಜ್ ಚಿತ್ರದ ನಿರ್ಮಾಪಕರು. ರವಿಶಂಕರ್ ಅವರೇ ಚಿತ್ರದ ಹೀರೋ.