ಸ್ಟ್ರೈಕರ್ ಚಿತ್ರದ ಕಥೆಯೇ ಅಂಥದ್ದು. ಹೀರೋಗೆ ಕನಸು ಬೀಳುತ್ತೆ. ಅದು ಮಾರನೇ ದಿನ ನಿಜವಾಗುತ್ತೆ. ಅದು ಅವನಿಗಿರುವ ಕಾಯಿಲೆ. ಕನಸಲ್ಲಿ ನಡೆದ ಘಟನೆಗಳೆಲ್ಲ ನಿಜ ಎಂದುಕೊಂಡು, ಮುಖವಾಡ ಧರಿಸಿಕೊಂಡು ಓಡಾಡುವವನ ಕಣ್ಣೆದುರು ಒಂದು ಘಟನೆ ನಡೆಯುತ್ತೆ. ಅದು ಕನಸಾ..? ನಿಜಾನಾ..? ನೋಡಿದ್ದು ಸುಳ್ಳಾ..? ನಡೆದದ್ದು ಸುಳ್ಳಾ..? ಇಡೀ ಚಿತ್ರಕ್ಕೆ ಥ್ರಿಲ್ಲಿಂಗ್ ವೇಗ ಸಿಗುವುದೇ ಅಲ್ಲಿ..
ಹೀಗೆ ಕಥೆಯ ಎಳೆಯನ್ನು ಹೇಳಿಯೇ ಕುತೂಹಲ ಹುಟ್ಟಿಸುತ್ತಾರೆ ನಿರ್ದೇಶಕ ಪ್ರವೀಣ್ ತೇಜ್. ಇದು ಸ್ಟೈಕರ್ ಚಿತ್ರದ ಕಥಾ ಹಂದರ. ಶಿಲ್ಪಾ ಮಂಜುನಾಥ್ ಚಿತ್ರದ ನಾಯಕಿ. ಭಜರಂಗಿ ಲೋಕಿ ಚಿತ್ರದಲ್ಲಿ ನ್ಸ್‍ಪೆಕ್ಟರ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಅವರು ವಿಲನ್ ಆಗಿ ಕಾಣಿಸಿಕೊಂಡಿಲ್ಲ. ಹಾಸ್ಯನಟ ಧರ್ಮಣ್ಣ ಅವರಿಗೂ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ. ಕಥೆ ಬರೆದಿರುವ ತ್ರಿವಿಕ್ರಮ್, ನೈಜ ಘಟನೆಗಳನ್ನೂ ಚಿತ್ರದಲ್ಲಿ ಸೇರಿಸಿಕೊಂಡಿದ್ದಾರಂತೆ.