ಹೆಚ್ಚೂ ಕಡಿಮೆ 2 ವರ್ಷದಿಂದ ಸಿನಿಮಾ ಲೋಕದಿಂದ ದೂರವೇ ಇದ್ದ ನಿಧಿ ಸುಬ್ಬಯ್ಯ, ಮತ್ತೆ ಬರುತ್ತಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಆನಂದ್ ಚಿತ್ರದ ಮೂಲಕ ನಿಧಿ ರೀ ಎಂಟ್ರಿ ಕೊಡುತ್ತಿದ್ದಾರೆ. ಪಿ.ವಾಸು ನಿರ್ದೇಶನದ ಆನಂದ್ ಚಿತ್ರದಲ್ಲಿ ನಿಧಿ ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಾರಂತೆ. ಕ್ಯಾರೆಕ್ಟರ್ ಸಖ್ಖತ್ ಇಂಟ್ರೆಸ್ಟಿಂಗ್ ಮತ್ತು ಚಾಲೆಂಜಿಂಗ್ ಎಂದಿದ್ದಾರೆ ನಿಧಿ.
ದ್ವಾರಕೀಶ್ ಬ್ಯಾನರ್‍ನಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.
ನಾನು ಮನಮೋಹಕ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ನಟಿಸಬೇಕಿತ್ತು. ಆದರೆ, ಅದೇಕೋ ಏನೋ ಚಿತ್ರ ಶುರುವಾಗಲಿಲ್ಲ. ಆ ಕನಸು ಮತ್ತೆ ಈಡೇರಿದೆ. ಆ್ಯಮ್ ಹ್ಯಾಪಿ ಎಂದಿದ್ದಾರೆ ನಿಧಿ.