ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿರೋದು ರಕ್ಷಿತ್ ಶೆಟ್ಟಿ. ಹೀಗಾಗಿ ಅದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರಲಿದೆ ಎಂದುಕೊಂಡವರಿಗೆ ಒಂದು ಸ್ಪೆಷಲ್ ಸುದ್ದಿ ಇಲ್ಲಿದೆ. ಚಿತ್ರದಲ್ಲಿ ಸುಮಾರು 12 ನಿಮಿಷಗಳ ಆ್ಯಕ್ಷನ್ ಇದೆಯಂತೆ. ಚಿತ್ರದ ಕ್ಲೈಮಾಕ್ಸ್‍ನಲ್ಲಿ 6 ನಿಮಿಷದ ಫೈಟಿಂಗ್ ಇದ್ಯಂತೆ.
`ಇಡೀ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಬಾಡಿ ಲಾಂಗ್ವೇಜ್ ಬದಲಿಸಿಕೊಂಡಿದ್ದಾರೆ. ಒಂದೊಂದು ಫೈಟ್ ಸೀನ್ ಶೂಟ್ ಮಾಡೋಕೂ 10-15 ದಿನ ತೆಗೆದುಕೊಂಡಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.