Print 
dhruva sarja, jagapathi babu pogaru,

User Rating: 1 / 5

Star activeStar inactiveStar inactiveStar inactiveStar inactive
 
jagapathi babu in dhruva sarja's pogaru
Jagapathi Babu, Dhruva Sarja

ಪೊಗರು ಚಿತ್ರಕ್ಕೆ ಇನ್ನೊಬ್ಬ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ. ತೆಲುಗು  ಚಿತ್ರರಂಗದ ಸ್ಟಾರ್ ವಿಲನ್ ಜಗಪತಿ ಬಾಬು ಧ್ರುವ ಸರ್ಜಾ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಜಗಪತಿ ಬಾಬು, ಸದ್ಯಕ್ಕೆ ದಕ್ಷಿಣ ಭಾರತದ ಎಲ್ಲ ಚಿತ್ರಗಳಲ್ಲೂ ನಟಿಸುತ್ತಿರುವ ಸೂಪರ್ ಸ್ಟಾರ್ ವಿಲನ್. ತೆಲುಗು, ತಮಿಳು, ಮಲಯಾಳಂನ ಎಲ್ಲ ಸ್ಟಾರ್ ನಟರೂ ಜಗಪತಿ ಬಾಬು ವಿಲನ್ ಆಗಲಿ ಎಂದು ಬಯಸುತ್ತಿರುವ ನಟ. ಕನ್ನಡದಲ್ಲಿಯೂ ಈಗಾಗಲೇ ಸುದೀಪ್ ಬಚ್ಚನ್ ಚಿತ್ರದಲ್ಲಿ ನಟಿಸಿರುವ ಜಗಪತಿ ಬಾಬು, ಪೊಗರು ಚಿತ್ರದಲ್ಲಿ ಧ್ರುವ ಎದುರು ವಿಲನ್ ಆಗುತ್ತಿದ್ದಾರೆ.

ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವ ಧ್ರುವ ಸರ್ಜಾರ ಪೊಗರು ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಕೂಡಾ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿ. ನಂದಕಿಶೋರ್ ನಿರ್ದೇಶನದ ಸಿನಿಮಾದ ಶೂಟಿಂಗ್ 2ನೇ ಹಂತದಲ್ಲಿದೆ.