ಗೋಲ್ಡನ್ ಸ್ಟಾರ್ ಗಣೇಶ್, ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಒಟ್ಟಿಗೇ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ವೇರ್ ಈಸ್ ಮೈ ಕನ್ನಡಕ ಚಿತ್ರ ಶುರುವಾಗಿಬಿಟ್ಟಿದೆ. ಮಹಾಲಕ್ಷ್ಮಿ ಲೇಔಟ್ನಲ್ಲಿರೋ ಪಂಚಮುಖಿ ದೇವಸ್ಥಾನದಲ್ಲಿ ಶುಭ ಮುಹೂರ್ತದಲ್ಲಿ ಚಿತ್ರ ಶುರುವಾಗಿದೆ. ಗಣೇಶ್ ಹಿರೋಯಿನ್ ಯಾರು ಗೊತ್ತಾ..? ಪತ್ರಲೇಖ ಎಂಬ ಬಾಲಿವುಡ್ ಚೆಲುವೆ.
ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರೋ ರಾಜ್-ದಾಮಿನಿ ದಂಪತಿ ಚಿತ್ರದ ನಿರ್ದೇಶಕರು. ನನಗೆ ತುಂಬಾ ಇಂಪ್ರೆಸ್ ಮಾಡಿದ್ದು ಚಿತ್ರದ ಕಥೆ ಎಂದು ಹೇಳಿದ್ದಾರೆ ಗಣೇಶ್. ಅರ್ಬಾಜ್ ಖಾನ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ಲಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮುಹೂರ್ತ ಈಗಲೇ ಆಗಿದ್ದರೂ, ಚಿತ್ರೀಕರಣ ಶುರುವಾಗುವುದು ಏಪ್ರಿಲ್ ತಿಂಗಳಲ್ಲಿ.