ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಟ್ರೇಲರ್ ನೋಡಿದವರು ಹೀಗೆ ಅಂದ್ಕೊಂಡ್ರೆ ಯಾರೇನ್ ಮಾಡೋಕಾಗುತ್ತೆ. ಪತ್ನಿ, ಮಗನನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ಇವರು ನಮ್ ಸನ್ನು.. ಇವರು ನಮ್ಮ ಮೂನು ಎಂದು ಗಂಡ ಹೇಳಿದ್ರೆ, ಹೆಂಡತಿ.. ಗಂಡನನ್ನು ಇವರು ನಮ್ಮ ಹನಿ ಅಂತಾರೆ..
ಫ್ಯಾಮಿಲಿ ಸಾಂಗಿಗೆ ಅಂತಾ ಯಜಮಾನನ ಹಾಡು ಬಂದ್ ಹೋಗುತ್ತೆ. ನಮ್ಮ ಮನೆಯಲಿ ದಿನವೂ ಮಿನುಗೋ ಚೈತ್ರವೇ.. ಆಆಆಆಆಆಆಆ....
ಹುಡುಗನಿಗೆ ಲವ್ವಾಗುತ್ತೆ. ಹುಡುಗಿ ಯಾರಂತೆ ಅಂದ್ರೆ, ಕಸ್ಟಮರ್ ಕೇರಲ್ಲಿ ಕೆಲಸ ಮಾಡೋ ಹುಡುಗಿ ಅಂತಾನೇ ಅಪ್ಪ. ಓಓಓ.. ಕಾಲ್ ಗರ್ಲ್ ಅನ್ನಿ.. ಅಂತಾಳೆ ಅಮ್ಮ.. ಓಓಓಓಓ....
ಹುಡುಗಿ.. ಹುಡುಗನಿಗೆ ಮೊದಲು ಕೊಡೋ ಗಿಫ್ಟು ಉಪ್ಪಿನಕಾಯಿ.. ಏನ್ ಕಿಕ್ಕು.. ಓಪ್ ಓಪ್ ಓಪ್ಪಾ..
ಮದ್ವೆ ಗಂಡಿಗೆ ಅದೇ ಇಲ್ಲ ಅಂದ್ರೆ ಹೆಂಗ್ರೀ ಆಗುತ್ತೆ ಸಂಸಾರ.. ಅದು ನಡೆಯೋದು ಟಿವಿ ಚಾನೆಲ್ಲಲ್ಲಿ. ಅದಂದ್ರೆ.. ಅಂತಾಳೆ ಆಂಕರ್. ಥೂ.. ಹೋಗ್ರೀಪಾ.. ಎಂದು ಪ್ಯಾನೆಲ್ಲಿನಲ್ಲಿದ್ದ ಚೆಲುವೆ.. ನಾಚಿಕೊಳ್ತಾಳೆ..
ಹಂಗಾದ್ರೆ.. ಹೀರೋ ಚಂದನ್ ಆಚಾರ್.. ಗಂಡ್ಸಲ್ವಾ..ಏನೋಪ್ಪ.. ಅವರಪ್ಪ ನೋಡಿದ್ರೆ.. ಗೇರ್ ಇಲ್ದೇ ಇರೋದನ್ನೇ ಕೇಳ್ತಾನೆ ಅಂತಾರೆ..
ಹೋಲ್ಡ್ ಆನ್.. ಇದು ಟ್ರೇಲರ್ ಸ್ಯಾಂಪಲ್ಲು. ತಬಲಾ ನಾಣಿಯೇ ಹೀರೋ ಅಂದ್ಕೊಂಡ್ರೆ.. ನೋ ಪ್ರಾಬ್ಲಂ. ಕಾಳ್ ಹಾಕೋದು ಅವರೇ. ಕಾಳ್ ಹಾಕ್ಸೋರು ಕುಮಾರು. ಇದೇ ವಾರ ಥಿಯೇಟರಿಗೆ ಬರ್ತಿದೆ.