ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ, ಈ ಬಾರಿ ಸರಳವಾಗಿರಲಿದೆ. ಅದು ದರ್ಶನ್ ಅವರೇ ಮಾಡಿಕೊಂಡಿರೋ ಮನವಿ. ಅದರ ಜೊತೆಯಲ್ಲೇ ದರ್ಶನ್ ಅವರ ಹೊಸ ಚಿತ್ರವೂ ಸೆಟ್ಟೇರುತ್ತಿದೆ. ಅದು ಮೆಜೆಸ್ಟಿಕ್ ನಿರ್ಮಾಪಕರ ಸಿನಿಮಾ.
ದರ್ಶನ್ ಅವರನ್ನು ಹೀರೋ ಆಗಿ ಪರಿಚಯಿಸಿದ ಎಂ.ಜಿ.ರಾಮಮೂರ್ತಿ, ದರ್ಶನ್ ಅವರ 55ನೇ ಸಿನಿಮಾಗೆ ನಿರ್ಮಾಪಕರು. ಸದ್ಯಕ್ಕೆ ಚಿತ್ರದ ಟೈಟಲ್ ಡಿ 55.
ಒಟ್ಟಿನಲ್ಲಿ ಹೇಳಿದಂತೆ ವರ್ಷವಿಡೀ ಬ್ಯುಸಿಯಾಗುತ್ತಿದ್ದಾರೆ ದರ್ಶನ್. 1ಕ್ಕೆ ಯಜಮಾನ ತೆರೆಗೆ ಬರ್ತಾನೆ. ಅದಾದ ನಂತರ ಕುರುಕ್ಷೇತ್ರ ರೆಡಿಯಾಗಿರುತ್ತೆ. ಬೆನ್ನಲ್ಲೇ ಒಡೆಯ ಕಾಣಿಸಿಕೊಳ್ತಾನೆ. ರಾಬರ್ಟ್ ಚಿತ್ರದ ಶೂಟಿಂಗ್ ಕೂಡಾ ಅಷ್ಟೊತ್ತಿಗೆ ಮುಗಿದಿರುತ್ತೆ. ಅದು ಒಂದು ಹಂತಕ್ಕೆ ಬರುತ್ತೆ ಎನ್ನುವಾಗಲೇ ಡಿ55. ದರ್ಶನ್ ಅಭಿಮಾನಿಗಳಿಗೆ 2019ರ ವರ್ಷವಿಡೀ ಹಬ್ಬ.