ಸಿದ್ಧಗಂಗೆಯ ಬೆಳಕಾಗಿದ್ದ ನಡೆದಾಡುವ ದೇವರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದ ಶಿವಣ್ಣ, ಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ. ಸ್ವಾಮೀಜಿ ಲಿಂಗೈಕ್ಯರಾದಾಗ ವಿದೇಶದಲ್ಲಿದ್ದ ಶಿವಣ್ಣ, ಸಿದ್ಧಗಂಗೆಗೆ ಭೇಟಿ ಕೊಟ್ಟು, ಗದ್ದುಗೆಗೆ ನಮನ ಸಲ್ಲಿಸಿದ್ದಾರೆ.
ಸಿದ್ಧಗಂಗೆ ನನಗೆ ಹೊಸದಲ್ಲ. ತುಮಕೂರು ಮಾರ್ಗವಾಗಿ ಹೋಗುವಾಗ ಪ್ರತಿಬಾರಿಯೂ ಮಠಕ್ಕೆ ಬಂದಿದ್ದೇವೆ. ಸ್ವಾಮಿಗಳ ದರ್ಶನ ಪಡೆದಿದ್ದೇವೆ. ಅವರು ಎಲ್ಲೂ ಹೋಗಿಲ್ಲ. ಇಲ್ಲೇ.. ಈ ಮಠದಲ್ಲೇ.. ಮಕ್ಕಳ ಜೊತೆಯಲ್ಲಿಯೇ ಇದ್ದಾರೆ. ಅವರನ್ನು ನೋಡಿದಾಗಲೆಲ್ಲ, ಇವರು ನಮಗೆ ಎಷ್ಟೋ ವರ್ಷಗಳಿಂದ ಗೊತ್ತಿರುವ ಆತ್ಮೀಯರು ಎಂಬ ಭಾವ ಮೂಡುತ್ತಿತ್ತು ಎಂದು ಸ್ಮರಿಸಿದ್ದಾರೆ.