` ಕರ್ನಾಟಕಕ್ಕಿಂತ ಮೊದಲೇ ಫಾರಿನ್ನಲ್ಲಿ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ammana mane will release in abroad
Ammana Mane

ರಾಘವೇಂದ್ರ ರಾಜ್‍ಕುಮಾರ್, 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಅಮ್ಮನ ಮನೆ. ಇದೇ ಮಾರ್ಚ್ 1ಕ್ಕೆ ರಿಲೀಸ್ ಆಗುತ್ತಿರುವ ಈ ಚಿತ್ರ ಕರ್ನಾಟಕಕ್ಕಿಂತ ಮೊದಲು ವಿದೇಶದಲ್ಲಿ ತೆರೆ ಕಾಣುತ್ತಿದೆ. ಆಸ್ಟ್ರೇಲಿಯಾ ಮೆಲ್ಬೋರ್ನ್, ಸಿಂಗಪುರ, ಅಕ್ಲೆಂಡ್‍ಗಳಲ್ಲಿ ಮೊದಲೇ ಪ್ರೀಮಿಯರ್ ಶೋ ಏರ್ಪಡಿಸಲಾಗಿದ್ದು, ಫೆಬ್ರವರಿ 28ರಂದೇ ವಿದೇಶದಲ್ಲಿರುವ ಕನ್ನಡಿಗರು ಈ ಚಿತ್ರ ನೋಡಲಿದ್ದಾರೆ.

ನಿಖಿಲ್ ಮಂಜು ನಿರ್ದೇಶನದ ಚಿತ್ರದಲ್ಲಿ ರಾಘಣ್ಣ, ಸ್ಕೂಲ್ ಮಾಸ್ಟರ್ ಆಗಿ, ತಾಯಿಯನ್ನು ಸದಾ ಪ್ರೀತಿ ಮಾಡುವ ಮಗನಾಗಿ ನಟಿಸಿದ್ದಾರೆ. ಬಿ.ಜಯಶ್ರೀ, ರಾಘವೇಂದ್ರಗೆ ತಾಯಿಯಾಗಿ ನಟಿಸಿದ್ದರೆ, ಮಾನಸಿ ಸುಧೀರ್ ಪತ್ನಿಯಾಗಿ ನಟಿಸಿದ್ದಾರೆ. ಶ್ರೀಲಲಿತ ಅವರ ಕಥೆಯನ್ನು ನಿರ್ಮಾಣ ಮಾಡಿರುವುದು ಆತ್ಮಶ್ರೀ ಮತ್ತು ಆರ್.ಎನ್.ಕುಮಾರ್. 

Chemistry Of Kariyappa Movie Gallery

BellBottom Movie Gallery