ರಾಣಾ. ಹರ್ಷ ನಿರ್ದೇಶನದ ಸಿನಿಮಾ. ಹೆಚ್ಚೂ ಕಡಿಮೆ ಒಂದು ವರ್ಷದಿಂದ ರಾಣಾ ಟೈಟಲ್ ಸದ್ದು ಮಾಡುತ್ತಲೇ ಇದೆ. ಪ್ಲಾನ್ ಪ್ರಕಾರ ಈ ಚಿತ್ರದಲ್ಲಿ ಯಶ್ ನಟಿಸಬೇಕಿತ್ತು. ಯಶ್ ಕೂಡಾ ಓಕೆ ಎಂದಿದ್ದರು. ಆದರೆ, ಈಗ ರಾಣಾ ಚಿತ್ರದ ಹೀರೋ ಬದಲಾಗಿದ್ದಾರೆ. ಯಶ್ ಜಾಗಕ್ಕೆ ಶಿವಣ್ಣ ಬಂದಿದ್ದಾರೆ ಎನ್ನುತ್ತಿವೆ ಮೂಲಗಳು.
ಕಾರಣ ಇಷ್ಟೆ, ಕೆಜಿಎಫ್ ನಂತರ ಯಶ್ ಸಂಪೂರ್ಣವಾಗಿ ಕೆಜಿಎಫ್ ಚಾಪ್ಟರ್2ಗೆ ತಮ್ಮನ್ನು ಅರ್ಪಿಸಿಕೊಂಡುಬಿಟ್ಟಿದ್ದಾರೆ ಜಯಣ್ಣ ಬ್ಯಾನರ್‍ನ ಕಿರಾತಕ2 ಚಿತ್ರವನ್ನೂ ಮುಂದೂಡಿದ್ದಾರೆ. ಒಂದಿಷ್ಟು ಶೂಟಿಂಗ್ ಕೂಡಾ ಮುಗಿಸಿದ್ದ ಕಿರಾತಕ-2 ಕೆಜಿಎಫ್ ಚಾಪ್ಟರ್2 ಮುಗಿಯುವವರೆಗೆ ಮೇಲೇಳುವುದಿಲ್ಲ.
ಹರ್ಷ ನಿರ್ದೇಶನದ ರಾಣಾ ಕೂಡಾ ಅದೇ ಸ್ಥಿತಿಗೆ ಹೋಗಲಿದೆ. ಹೀಗಾಗಿಯೇ ಯಶ್ ಅವರಿಗೆ ಬೇರೊಂದು ಪ್ರಾಜೆಕ್ಟ್ ರೆಡಿ ಮಾಡಲು ಪ್ಲಾನ್ ಮಾಡಿಕೊಂಡ ಹರ್ಷ, ರಾಣಾ ಚಿತ್ರವನ್ನು ಶಿವರಾಜ್ ಕುಮಾರ್ ಅವರಿಗಾಗಿ ಮಾಡಲು ರೆಡಿಯಾಗಿದ್ದಾರಂತೆ.