ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ವೇಯ್ಟಿಂಗ್ ಮುಗಿಯುವ ಕಾಲ ಹತ್ತಿರ ಬಂದಿದೆ. ಯಜಮಾನನ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್ ಸಿಂಪ್ಲಿ ಸೂಪರ್ಬ್. ಇದುವರೆಗಿನ ದರ್ಶನ್ ಚಿತ್ರದ ಟ್ರೇಲರ್‍ಗಳಿಗಿಂತ ಡಿಫರೆಂಟ್ ಆಗಿದೆ ಅಷ್ಟೇ ಅಲ್ಲ, ಟೆಕ್ನಿಕಲಿ ಸೂಪರ್ ಆಗಿದೆ. ಹೀಗಾಗಿಯೇ.. ಸಂತಸದ ಮುಗಿಲು ಮುಟ್ಟಿರುವ ಅಭಿಮಾನಿಗಳು ಯಜಮಾನನ ಟ್ರೇಲರ್‍ನ್ನೇ ನೋಡಿ ನೋಡಿ.. ಆನಂದಿಸುತ್ತಿದ್ದಾರೆ.
ದರ್ಶನ್ ಅವರ ಲುಕ್, ಗೆಟಪ್ ಎಲ್ಲವೂ ಮಾಸ್ ಆಗಿದೆ. ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ, ನಿಯತ್ತಿನಿಂದ ಕಟ್ಟಿದ ಸ್ವಂತ ಬ್ರ್ಯಾಂಡ್ ಇದು ಎನ್ನುವ ಡೈಲಾಗ್ ಕಿಕ್ಕೇರಿಸುತ್ತೆ. ರಶ್ಮಿಕಾ ಮಂದಣ್ಣ, ದೇವರಾಜ್, ಡಾಲಿ ಧನಂಜಯ್, ರವಿಶಂಕರ್, ಅನೂಪ್ ಸಿಂಗ್ ಮೊದಲಾದವರು ನಟಿಸಿರುವ ಯಜಮಾನನ ಹಬ್ಬ ಮಾರ್ಚ್ 1ರಿಂದ ಆರಂಭ.