ಸಂಜನಾ ಆನಂದ್. ಡೆಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗಿ. ಈಗ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಹೀರೋಯಿನ್. ಎಂಜಿನಿಯರಿಂಗ್ ಓದಿಕೊಂಡಿದ್ದ ಸಂಜನಾಗೆ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಆರಂಭದಲ್ಲಿ ವೀಕೆಂಡ್ ಕೆಲಸ ಎಂದುಕೊಂಡಿದ್ದ ಸಂಜನಾಗೆ, ಅಭಿನಯ ಅಷ್ಟು ಸುಲಭ ಅಲ್ಲ ಎನಿಸಿದ ನಂತರ ಸೀರಿಯಸ್ಸಾಗಿ ಹೋದರು. ಕೆಲಸಕ್ಕೆ ರಾಜೀನಾಮೆ ಕೊಟ್ಟು ಚಿತ್ರದಲ್ಲಿ ತೊಡಗಿಸಿಕೊಂಡರು.
ಚಿತ್ರದ ನಿರ್ದೇಶಕ ಕುಮಾರ್ ಅವರು ಮಾಡಿಸಿದ ರಿಹರ್ಸಲ್, ತಬಲಾ ನಾಣಿಯವರ ಮಾರ್ಗದರ್ಶನ ಚೆನ್ನಾಗಿ ಕೆಲಸ ಮಾಡಿತು. ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಚೆನ್ನಾಗಿ ನಟಿಸಿದ್ದೇನೆ. ನನಗಂತೂ ಆತ್ಮವಿಶ್ವಾಸ ಇದೆ. ಚಿತ್ರವೂ ಗೆಲ್ಲುತ್ತೆ. ನಾನೂ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಸಂಜನಾ.
ಸಿನಿಮಾದಲ್ಲಿಯೇ ಮುಂದುವರಿಯುವ ಆಸೆ ಇದೆ. ಅಕಸ್ಮಾತ್ ಆಗದೇ ಹೋದರೆ, ನೋ ಪ್ರಾಬ್ಲಂ. ಕೆಲಸವಂತೂ ಇದ್ದೇ ಇದೆ ಎನ್ನುವ ಸಂಜನಾ ಆನಂದ್, ಎಂಜಿನಿಯರ್ ಅಷ್ಟೇ ಭರತನಾಟ್ಯ ಕಲಾವಿದೆಯೂ ಹೌದು.