ಚುಟುಚುಟು ಅಂತೈತಿ.. ನನಗಾ ಚುಮುಚುಮು ಆಗತೈತಿ.. ಎಂದು ಹಾಡುತ್ತಾ, ಕುಣಿಯುತ್ತಾ ಪ್ರೇಕ್ಷಕರ ಎದೆಗೇ ಲಗ್ಗೆಯಿಟ್ಟ ಶರಣ್, ಅಶಿಕಾ ರಂಗನಾಥ್ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಅದು ಅವತಾರ್ ಪುರುಷ ಚಿತ್ರದಲ್ಲಿ.
ಸಿಂಪಲ್ ಸುನಿ, ಈ ಸೂಪರ್ ಹಿಟ್ ಜೋಡಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ್ ಪುರುಷ ಚಿತ್ರದ ಚಿತ್ರೀಕರಣ ಫೆಬ್ರವರಿ 18ರಿಂದ ಶುರುವಾಗಲಿದೆ.
ಸಿಂಪಲ್ ಸುನಿ ಡೈರೆಕ್ಷನ್, ಪುಷ್ಕರ್ ಬ್ಯಾನರ್ ಸಿನಿಮಾ ಮತ್ತು ಮತ್ತೊಮ್ಮೆ ಶರಣ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ ಎಂದಿದ್ದಾರೆ ಅಶಿಕಾ.