` ಅಪ್ಪು ಕೇಳಿದ್ದಾರೆ.. ಅಭಿಮಾನಿಗಳೇ ಉತ್ತರ ಕೊಡಿ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
appu asks fans one question
Puneeth Rajkumar

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ, ಥಿಯೇಟರುಗಳಿಗೆ ಲಗ್ಗೆಯಿಟ್ಟು, ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದೆ. ಚಿತ್ರದ ಕಥೆ, ಪುನೀತ್ ಅಭಿನಯ, ಪವನ್ ಒಡೆಯರ್ ಡೈರೆಕ್ಷನ್.. ಎಲ್ಲದಕ್ಕೂ ಪ್ರೇಕ್ಷಕರು ಜೈಕಾರ ಹಾಕುತ್ತಿರುವುದು ಸ್ವತಃ ಪುನೀತ್ ಅವರನ್ನೂ ಖುಷಿಗೊಳಿಸಿದೆ. ಹೀಗಾಗಿಯೇ ಅವರು ಚಿತ್ರವನ್ನು ವೀಕ್ಷಿಸುತ್ತಿರುವವರಿಗೆ, ಈಗಾಗಲೇ ನೋಡಿ ಮೆಚ್ಚಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.

`ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು, ನಮ್ಮ ಕುಟುಂಬ ಸದಾ ಋಣಿಯಾಗಿರುತ್ತೇವೆ. ಈ ಪ್ರೀತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ' ಎಂದಿದ್ದಾರೆ ಪುನೀತ್.

ಇದೆಲ್ಲದರ ಜೊತೆಗೆ ಅವರು ಅಭಿಮಾನಿಗಳ ಎದುರು ಪುಟ್ಟದೊಂದು ಪ್ರಶ್ನೆಯಿಟ್ಟಿದ್ದಾರೆ. ಪುನೀತ್, ಕನ್ನಡಕಧಾರಿಯಾಗಿ ನಟಿಸಿರುವುದು ಇದೇ ಮೊದಲು. ಹೀಗಾಗಿಯೇ.. ಕನ್ನಡಕದ ಲುಕ್ ಹೇಗಿದೆ..? ದಯವಿಟ್ಟು ತಿಳಿಸಿ ಎಂದು ಕೇಳಿಕೊಂಡಿದ್ದಾರೆ ಅಪ್ಪು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery