` ನಟಸಾರ್ವಭೌಮನನ್ನು ಮೊದಲ ದಿನವೇ ಕಣ್ತುಂಬಿಕೊಂಡ ಕ್ರಿಕೆಟ್ ಸ್ಟಾರಿಣಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
veda krishnamurthy appreciated natasarvabhouma
Veda Krishnamurthy Praises Natasarvabhouma Movie

ನಟಸಾರ್ವಭೌಮ ಚಿತ್ರ ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಿರುವಾಗಲೇ ವಿಶೇಷ ಅಭಿಮಾನಿಯೊಬ್ಬರಿಂದ ಅಪ್ಪುಗೆ ಮೆಚ್ಚುಗೆಯ ಅಪ್ಪುಗೆ ಸಿಕ್ಕಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಆಟಗಾರ್ತಿ, ಭಾರತೀಯ ಮಹಿಳಾ ಕ್ರಿಕೆಟ್‍ನ ಅವಿಭಾಜ್ಯ ಅಂಗವಾಗಿರುವ ವೇದಾ ಕೃಷ್ಣಮೂರ್ತಿ, ನಟಸಾರ್ವಭೌಮ ಚಿತ್ರವನ್ನು ಮೊದಲ ದಿನವೇ ನೋಡಿ, ಮೆಚ್ಚಿ ಥ್ರಿಲ್ಲಾಗಿ.. ಅಪ್ಪುಗೆ ಶುಭ ಕೋರಿದ್ದಾರೆ.

ಅಪ್ಪಟ ಅಭಿಮಾನಿಯಂತೆ ಮೊದಲ ದಿನವೇ ಚಿತ್ರ ನೋಡಿದ್ದ ವೇದಾ `ಇದು ಅದ್ಭುತ ಸಿನಿಮಾ. ಅದರಲ್ಲೂ ಕ್ಲೈಮಾಕ್ಸ್ ಸೂಪರ್. ಎಲ್ಲರೂ ನೋಡಲೇಬೇಕು. ಈ ಚಿತ್ರ ಎಲ್ಲ ದಾಖಲೆಗಳನ್ನೂ ಮುರಿಯಲಿ. ಆಲ್ ದಿ ಬೆಸ್ಟ್ ಸರ್' ಎಂದು ಶುಭ ಕೋರಿದ್ದರು.

ಪುನೀತ್ ರಾಜ್‍ಕುಮಾರ್ ಎಂದಿನ ಸ್ಟೈಲ್‍ನಲ್ಲಿಯೇ `ಚಿತ್ರ ನೋಡಿದ್ದಕ್ಕೆ ಧನ್ಯವಾದ. ನೀವು ಸಿನಿಮಾ ನೋಡಿದ್ದು, ಮೆಚ್ಚಿಕೊಂಡಿದ್ದು ನನಗೆ ನಿಜಕ್ಕೂ ಖುಷಿಯಾಯ್ತು' ಎಂದು ಪ್ರತಿಕ್ರಿಯಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery