ಹರಿಶ್ಚಂದ್ರ ಘಾಟ್ನಲ್ಲಿ ಒಂದಿಡೀ ದಿನ ಇದ್ದು, 11 ಶವಗಳಿಗೆ ಸಂಸ್ಕಾರ ಮಾಡಿದ್ದು ಒಂದು ವ್ರತ. ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿದ್ದು ಗಂಗಾಸ್ನಾನ ಮಾಡಿದ್ದು ಇನ್ನೊಂದು ವ್ರತ. ಈಗ ಕಾಲಭೈರವೇಶ್ವರನ ಪೂಜೆ ಕೈಗೆ ಬಳೆ ಹಾಕಿಸಿಕೊಂಡಿದ್ದು ಮತ್ತೊಂದು ವ್ರತ. ಹೀಗೆ ಸತತ ಒಂದು ವರ್ಷದಿಂದ ವ್ರತದಲ್ಲಿಯೇ ಇದ್ದ ನಟ ಜಗ್ಗೇಶ್, ಈಗ ವ್ರತವನ್ನು ಮುಗಿಸಿದ್ದಾರೆ. ಕಾಲಭೈರವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿ, ದೇವರ ಎದುರು ಮಂಡಿಯೂರಿದ್ದಾರೆ.
ತುರುವೇಕೆರೆ ತಾಲೂಕಿನ ಅನಗೋಡು ಗ್ರಾಮದಲ್ಲಿರುವ ಕಾಲಭೈರವೇಶ್ವರ ದೇವಾಲಯ, ಜಗ್ಗೇಶ್ ಅವರನ್ನು ಸೆಳೆದಿತ್ತು. ಅದು ಅವರ ಮನೆದೇವರು. ಆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ ಜಗ್ಗೇಶ್. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್, ಆದಿಚುಂಚನಗಿರಿ ಮಠದ ಶಾಖಾಮಠದ ಸ್ವಾಮೀಜಿ ಪ್ರಸನ್ನನಾಥ ಸ್ವಾಮೀಜಿ ಭಾಗಿಯಾಗಿದ್ದರು.