ದರ್ಶನ್ ಅಭಿನಯದ ಯಜಮಾನ ಚಿತ್ರವನ್ನು ಅಭಿಮಾನಿಗಳು ಕಾತರದಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳದ್ದು ಹೆಚ್ಚೂ ಕಡಿಮೆ 2 ವರ್ಷದ ಹಸಿವು. ಆ ಹಸಿವು ನೀಗುವ ಕಾಲ ಹತ್ತಿರವಾಗುತ್ತಿದೆ. ಫೆಬ್ರವರಿ 10ರ ಭಾನುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಯಜಮಾನ ಚಿತ್ರದ ಟ್ರೇಲರ್ ಪ್ರತ್ಯಕ್ಷವಾಗಲಿದೆ.
ಈಗಾಗಲೇ ನಂದಿ, ಬಸಣ್ಣಿ, ಯಜಮಾನ ಹಾಡುಗಳು ಅಭಿಮಾನಿಗಳ ನಾಲಗೆ ತುದಿಯಲ್ಲಿವೆ. ಈಗ ಟ್ರೇಲರ್ ಬಾಕಿ. ದರ್ಶನ್, ರಶ್ಮಿಕಾ ಮಂದಣ್ಣ, ದೇವರಾಜ್ ನಟಿಸಿರುವ ಚಿತ್ರಕ್ಕೆ ಹರಿಕೃಷ್ಣ, ಕುಮಾರ್ ನಿರ್ದೇಶನವಿದ್ದರೆ, ಶೈಲಜಾ ನಾಗ್, ಬಿ.ಸುರೇಶ್ ನಿರ್ಮಾಪಕರು. ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್‍ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.