` ರಾಕ್‍ಲೈನ್ ಬ್ಯಾನರ್ ನಮ್ದೇ - ಪುನೀತ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rockline banner is like family banner says puneeth
Puneeth Rajkumar, Rockline Venkatesh

ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ ನಟಿಸುವಾಗ ನಾವು ಬೇರೆ ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನಿಸುವುದಿಲ್ಲ. ಅದು ನಮ್ಮದೇ ಬ್ಯಾನರ್ ಎನಿಸುತ್ತೆ. ಹೀಗಾಗಿಯೇ ಅವರು ಆಫರ್ ಕೊಟ್ಟಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಇದು ಪುನೀತ್ ರಾಜ್‍ಕುಮಾರ್ ಮಾತು.

ರಾಕ್‍ಲೈನ್ ವೆಂಕಟೇಶ್ ಮತ್ತು ಡಾ.ರಾಜ್ ಮನೆತನದ ಸಂಬಂಧ, ಗೆಳೆತನ, ಬಾಂಧವ್ಯ ಇಡೀ ಕರ್ನಾಟಕಕ್ಕೇ ಗೊತ್ತು. ಹೀಗಾಗಿಯೇ, 

ಪುನೀತ್ ರಾಜ್‍ಕುಮಾರ್ ಈ ಮಾತು ಹೇಳಿದ್ದಾರೆ.

ನಟಸಾರ್ವಭೌಮ, ರಾಕ್‍ಲೈನ್ ಮತ್ತು ಪುನೀತ್ ಕಾಂಬಿನೇಷನ್‍ನ 3ನೇ ಸಿನಿಮಾ. ಈ ಹಿಂದೆ ಅಪ್ಪು ಅವರಿಗಾಗಿ ಅಜಯ್ ಮತ್ತು ಮೌರ್ಯ ಚಿತ್ರಗಳನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.