ವಜ್ರಕಾಯ ಚಿತ್ರದಲ್ಲಿ ಗಮನ ಸೆಳೆದಿದ್ದ ನಭಾ ನಟೇಶ್, ಈಗ ತೆಲುಗು ಚಿತ್ರರಂಗದಲ್ಲಿ ಹಾರುತ್ತಿದ್ದಾರೆ. ಅದರಲ್ಲೂ ಪುರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಚಿತ್ರಕ್ಕೆ ನಭಾ ನಟೇಶ್ ನಾಯಕಿ. ನಭಾ ಅವರ ನಟನೆ ನೋಡಿದ ಪುರಿ ಜಗನ್ನಾಥ್, ನೆನಪಿಸಿಕೊಂಡಿರೋದು ಕನ್ನಡ ಚಿತ್ರರಂಗದ ಸುಂಟರಗಾಳಿ ರಕ್ಷಿತಾ ಅವರನ್ನ.
ನಭಾ ಅವರ ಎನರ್ಜಿ ನೋಡ್ತಿದ್ರೆ, ನನಗೆ ರಕ್ಷಿತಾ ನೆನಪಾಗ್ತಾರೆ. ರಕ್ಷಿತಾ ಅವರಂತೆಯೇ ನಭಾ ನಟೇಶ್ ಕೂಡಾ ಟ್ಯಾಲೆಂಟೆಡ್ ನಟಿ ಎಂದಿದ್ದಾರೆ ಪುರಿ ಜಗನ್ನಾಥ್.
ಪುರಿ ಜಗನ್ನಾಥ್, ಕನ್ನಡ ಹಾಗೂ ತೆಲುಗಿನಲ್ಲಿ ರಕ್ಷಿತಾ ಅವರನ್ನು ಬೆಳ್ಳಿ ತೆರೆಗೆ ಪರಿಚಯಿಸಿದ್ದ ನಿರ್ದೇಶಕ. ಅದಾದ ಮೇಲೆ ಹೆಚ್ಚೂ ಕಡಿಮೆ ಒಂದು ದಶಕ ರಕ್ಷಿತಾ, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಮಹಾರಾಣಿಯಾಗಿದ್ದರು.