ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಆಗಬೇಕಿದ್ದ ಕುರುಕ್ಷೇತ್ರ ಚಿತ್ರ 51ನೇ ಚಿತ್ರವಾಗುತ್ತಿದೆ. ಅದಕ್ಕಿಂತ ಮೊದಲೇ ಯಜಮಾನ ಬಂದಿರುತ್ತಾನೆ. 2018ರ ಸಂಕ್ರಾಂತಿಗೇ ರಿಲೀಸ್ ಆಗಬೇಕಿದ್ದ ಕುರುಕ್ಷೇತ್ರ 3ಡಿ ವರ್ಷನ್ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಈಗ 3ಡಿ ಕೆಲಸವೂ ಬಹುತೇಕ ಮುಗಿದಿದ್ದು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯ ಡಬ್ಬಿಂಗ್ ಕೆಲಸಗಳು ಶುರುವಾಗಿವೆಯಂತೆ.
ಎಲ್ಲ ಭಾಷೆಗಳಲ್ಲೂ ಖ್ಯಾತ ಬರಹಗಾರರು, ಡೈಲಾಗ್ ಬರೆಯುತ್ತಿದ್ದಾರೆ. ಡಬ್ಬಿಂಗ್ ಆರ್ಟಿಸ್ಟುಗಳ ಆಯ್ಕೆಯೂ ಮುಗಿದಿದ್ದು, ಶೀಘ್ರದಲ್ಲೇ ಡಬ್ಬಿಂಗ್ ಶುರುವಾಗಲಿದೆ.
3 ಗಂಟೆ 5 ನಿಮಿಷದ ಕುರುಕ್ಷೇತ್ರ ಚಿತ್ರದ 2ಡಿ ವರ್ಷನ್ ಈಗಾಗಲೇ ಸೆನ್ಸಾರ್ ಆಗಿದೆ. 3ಡಿ ವರ್ಷನ್ ಬಂದೊಡನೆ ಸೆನ್ಸಾರ್ ಮುಗಿಸಿ ಏಪ್ರಿಲ್ 6ಕ್ಕೆ ಚಿತ್ರ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಏಪ್ರಿಲ್ 7ಕ್ಕೆ ಯುಗಾದಿ.